ಮೈಸೂರು: ಕಲಾಮಂದಿರ ಆವರಣದಲ್ಲಿರುವ ಕಿಂದರಜೋಗಿ ಆವರಣದಲ್ಲಿ ಮೇ 27ರಂದು ‘ರಂಗ ಸಂಸ್ಕೃತಿ ಉಳಿಸೋಣ-ಬೆಳೆಸೋಣ’ ಸಾಂಸ್ಕೃತಿಕ ಚರ್ಚಾ ಕೂಟ ಆಯೋಜಿಸಲಾಗಿದೆ ಎಂದು ರಂಗಾಯಣದ ನಿವೃತ್ತ ನಿರ್ದೇಶಕ ಎಚ್.ಜನಾರ್ದನ್(ಜನ್ನಿ ) ಹೇಳಿದರು.
ರಂಗ ಸಂಸ್ಕೃತಿ, ಕಲೆ, ಸಾಹಿತ್ಯ, ಸಂಗೀತ ಮತ್ತಿತರ ಎಲ್ಲ ಬಹು ಸಾಂಸ್ಕೃತಿಕ ನೆಲೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಜ್ಞಾವಂತ ಸಮಾಜದಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಸಂಜೆ 5ಕ್ಕೆ ಈ ಚರ್ಚಾ ಕೂಟ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಹುಸಾಂಸ್ಕೃತಿಕ ನೆಲೆಗಳ ಸಂರಕ್ಷಣೆಯು ಮೂಲತಃ ಕನ್ನಡಿಗರ ನೈತಿಕ ಹೊಣೆ ಮತ್ತು ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಂಗಾಸಕ್ತರು, ರಂಗಕರ್ಮಿಗಳು, ಸಾಹಿತಿ, ಕಲಾವಿದರು ಮತ್ತು ಸಾಹಿತ್ಯಾರಾಧಕರು ಇದರಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನೆಲೆ ಹಿನ್ನೆಲೆಯ ಕೆ.ಆರ್.ಗೋಪಾಲಕೃಷ್ಣ, ಹಿರಿಯ ರಂಗಕಲಾವಿದರಾದ ಕೃಷ್ಣಪ್ರಸಾದ್, ಮೈಮ್ ರಮೇಶ್, ಮುರಳೀಧರ್ ಇದ್ದರು.