

ಯಾದಗಿರಿ: ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸೇಡಂ ಹಾಗೂ ವಿಕಾಸ ಅಕಾಡೆಮಿ ಕಲಬುಗರ್ಿ ವತಿಯಿಂದ ಕಲಬುರಗಿ ಜಿಲ್ಲೆ ಸೇಡಂನಲ್ಲಿ 2025ರಲ್ಲಿ ಸ್ವರ್ಣ ಜಯಂತಿ ಕಾರ್ಯಕ್ರಮದ ನಿಮಿತ್ಯ ಭಾರತೀಯ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಳ್ಳಲು ತೀಮರ್ಾನಿಸಲಾಗಿದ್ದು ಈ ಉತ್ಸವ ಕಾರ್ಯಕ್ರಮದ ನಿಮಿತ್ಯ ಮಾತೃ ಸಮಾವೇಶ, ಶೈಕ್ಷಣಿಕ ಸಮಾವೇಶ, ಯುವ ಸಮಾವೇಶ, ಗ್ರಾಮ ಕೃಷಿ ಸಮಾವೇಶ, ಆಹಾರ, ಆರೋಗ್ಯ ಸಮಾವೇಶ, ಪ್ರಕೃತಿ ಮತ್ತು ನಾವು, ಸೇವಾ ಶಕ್ತಿ ಸಮಾವೇಶ, ದೇಶ, ಧರ್ಮ, ಸಂಸ್ಕೃತಿ ಮುಂತಾದ ಕಾರ್ಯಕ್ರಮಗಳನ್ನು ತುಂಬಾ ವಿಶಿಷ್ಟವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಅಕಾಡೆಮಿಯ ಬಸವರಾಜ ಪಾಟೀಲ ಸೇಡಂ ಅಭಿಪ್ರಾಯಪಟ್ಟರು.
ಶಹಾಪುರದ ನಗರದ ಫಕೀರೇಶ್ವರ ಮಠದ ಸಭಾಭವನದಲ್ಲಿ ವಿಕಾಸ ಅಕಾಡೆಮಿ ಯಾದಗಿರಿ ಜಿಲ್ಲೆಯ ವತಿಯಿಂದ ಹಮ್ಮಿಕೊಂಡ ವಿಕಾಸ ಅಕಾಡೆಮಿಯ ಸರ್ವಹಿತೈಶಿಗಳ ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಅವರು ಕಳೆದ 25 ವರ್ಷಗಳಿಂದ ಕೋತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಂಸ್ಥೆಯು ಕಲ್ಯಾಣ ಕನರ್ಾಟದ ಸವರ್ಾಂಗೀಣ ಅಭಿವೃದ್ಧಿಯಾಗಲು ತುಂಬಾ ವಿಶಿಷ್ಠವಾಗಿ ಹಲವಾರು ರಚನಾತ್ಮಕ ಕಾರ್ಯಚಟುವಟಿಕೆಗಳ ಮೂಲಕ ತನ್ನನ್ನು ತಾನು ತೊಡಗಿಸಿಕೊಂಡು ಶ್ರಮಿಸುತ್ತಿದೆ ಮತ್ತು ಕಲ್ಯಾಣ ಕನರ್ಾಟಕದ ಸಾಂಸ್ಕತಿಕ ಪರಂಪರೆಯನ್ನು ಉಳಿಸಿ ಬೆಳೆಸಲು ಸೃಜನಾತ್ಮಕ ಕಾರ್ಯಕ್ರಮಗಳ ಮೂಲಕ ಪ್ರಯತ್ನಿಸುತ್ತಿದೆ ಎಂದರು.
ಭಾರತೀಯ ಸಂಸ್ಕೃತಿ ಉತ್ಸವದಲ್ಲಿ ಕೃಷಿ ಲೋಕ, ಜ್ಞಾನ ಲೋಕ, ವಿಜ್ಞಾನ ಲೋಕ, ಕಲಾ ಲೋಕ, ಸೃಜನ ಲೋಕ, ಕಾಯಕ ಲೋಕ, ವ್ಯವಹಾರ ಲೋಕ, ಮಕ್ಕಳ ಲೋಕ ಮುಂತಾದ ವೈವಧ್ಯಮ ಕಾರ್ಯಕ್ರಮಗಳು ಜರುತ್ತವೆ. ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಡಿಸೆಂಬರ್ 03ರಂದು ಬಸವ ಕಲ್ಯಾಣದಲ್ಲಿ ಶರಣರ ಸಂಸ್ಕೃತಿಯ ಪ್ರತಿಬಿಂಬಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ನಮ್ಮ ಪ್ರತಿಯೊಂದು ಕಾರ್ಯಕ್ರಮಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.