ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆ ಯೋಜನೆಗೆ ನಿಧಿ ಬಿಡುಗಡೆ ಮಾಡಲು ಪ್ರಸ್ತಾವನೆ

10 ckm 3
ಚಿಕ್ಕಮಗಳೂರಿನ ಡಿಸಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಭಾರತ ಸರ್ಕಾರದ ಸೂಕ್ಷö್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯಕ್ರಮದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ ಕುರಿತು ಸಭೆ ನಡೆಯಿತು. ಮೀನಾ ನಾಗರಾಜ್, ನಾರಾಯಣರಡ್ಡಿ ಕನಕರಡ್ಡಿ, ಸುಜಾತಾ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ರಾಜ್ಯದಲ್ಲಿ ಕಾಳು ಮೆಣಸು, ಕಾಫಿ, ಅಡಕೆ ಇವುಗಳ ಸಂಸ್ಕರಣೆಗಾಗಿ ಚಿಕ್ಕಮಗಳೂರಿನಲ್ಲಿಯೇ ಸಂಸ್ಕರಣೆ ಘಟಕವನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಅನುದಾನ ಬಿಡುಗಡೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಾರತ ಸರ್ಕಾರದ ಸೂಕ್ಷö್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ಕಾರ್ಯಕ್ರಮದ ಸಾಂಪ್ರದಾಯಿಕ ಕೈಗಾರಿಕೆಗಳ ಪುನರುತ್ಪಾದನೆಗಾಗಿ ನಿಧಿಯ ಯೋಜನೆ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೆಂದ್ರ ಸರ್ಕಾರದಿಂದ ಶೇ. ೯೦ರಷ್ಟು ಅನುದಾನ ಪಡೆದು ಉಳಿದ ಶೇ. ೧೦ರಷ್ಟು ಅನುದಾನವನ್ನು ಫಲಾನುಭವಿಗಳು ಭರಿಸಿ ಒಟ್ಟು ೨.೫೦ ಕೋಟಿಯಿಂದ ೫ ಕೋಟಿಯ ಯೋಜನೆ ಅನುಷ್ಠಾನ ಮಾಡಿಕೊಳ್ಳಬಹುದು. ಇನ್ನು ಈ ಯೋಜನೆಯಡಿ ಕಾಳು ಮೆಣಸು, ತೆಂಗು, ಕಾಫಿ, ಅಡಕೆ, ಖಾದಿ ಕೈಗಾರಿಕೆ, ಗ್ರಾಮ ಕೈಗಾರಿಕೆ, ಕಾಯರ್‌ಇಂಡಸ್ಟಿçÃಸ್‌ಯAಥ ಸಂಪ್ರದಾಯಿಕ ಕೈಗಾರಿಕೆಗಳನ್ನು ಆರಂಭಿಸಬಹುದು ಎಂದರು.

ಈ ಯೋಜನೆಯ ಮೂಲ ಉz್ದೆÃಶ ಸಾಂಪ್ರದಾಯಿಕ ಕೈಗಾರಿಕೆ ಮತ್ತು ಕುಶಲಕರ್ಮಿಗಳನ್ನು ಸಾಮೂಹಿಕವಾಗಿ ಸಂಘಟಿಸಲು, ಅವರನ್ನು ಸ್ಪರ್ಧಾತ್ವಕವಾಗಿಸಲು ಹಾಗೂ ಅವರ ಧೀರ್ಘಾವಧಿಯ ಸುಸ್ಥಿರತೆ ಹಾಗೂ ಪ್ರಮಾಣ ಆರ್ಥಿಕತೆಗೆ ಬೆಂಬಲವನ್ನು ಒದಗಿಸುವುದಾಗಿದೆ ಎಂದು ಮಾಹಿತಿ ನೀಡಿದರು.

ಸಾಂಪ್ರಾದಾಯಿಕ ಉದ್ಯಮದ ಕುಶಲಕರ್ಮಿಗಳು ಮತ್ತು ಉತ್ಪಾದಕರಿಗೆ ನಿರಂತರ ಉದ್ಯೋಗವನ್ನು ಒದಗಿಸುವುದಲ್ಲದೇ ಹೊಸ ಉತ್ಪನ್ನಗಳಿಗೆ ಬೆಂಬಲವನ್ನು ಈ ಯೋಜನೆಯಡಿ ನೀಡಲಾಗುವುದು. ಸುಧಾರಿತ ಪ್ಯಾಕೇಜಿಂಗ್ ಮತ್ತು ಮಾರ್ಕೆಟಿಂಗ್ ಮೂಲಸೌಕರ್ಯವನ್ನು ಸುಧಾರಿಸುವ ಮೂಲಕ ಅಂತಹ ಕ್ಲಸ್ಟರ್‌ಗಳ ಸಾಮೂಹಿಕ ಉತ್ಪನ್ನಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಯೋಜನೆ ಉz್ದÉÃಶವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಉಪನಿರ್ದೇಶಕ ವೆಂಕಟೇಶ್ ಚೌಹಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net