

ಗೋಣಿಕೊಪ್ಪ; ಮುಳಿಯ ಜ್ಯುವೆಲ್ಸ್‌ನಲ್ಲಿ ಕೊಡಗಿನ ಸಾಂಪ್ರದಾಯಿಕ ಆಭರಣಗಳ ಹಬ್ಬಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಸ್ಥಳೀಯ ಪ್ರಸೂತಿ ತಜ್ಞೆ ಡಾ.ಕವಿತಾ ಬೋಪಣ್ಣ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರಿದರು. ಶಾಖಾ ಪ್ರಬಂಧಕ ಬಿ.ಎಸ್.ಕಿಶೋರ್ ಮಾತನಾಡಿ, ಹಬ್ಬದಲ್ಲಿ ಕೊಡಗಿನ ಆಭರಣಗಳ ಅಪರಿಮಿತ ಅನನ್ಯ ಆಯ್ಕೆಗಳು ಗ್ರಾಹಕರಿಗೆ ದೊರೆಯಲಿದೆ. ಇದರೊಂದಿಗೆ ಆಭರಣಗಳಲ್ಲಿ ವ್ಯಾಕ್ಸ್ ಪ್ರಮಾಣದ ತೂಕವನ್ನು ಗ್ರಾಹಕರ ಎದುರು ಪರಿಶೀಲಿಸುವ ವಿಧಾನವನ್ನು ಪರಿಚಯಿಸಲಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.
.