ಸಾಂತ್ವನ ಕೇಂದ್ರಗಳಿಗೆ ಬೀಗ ಬೇಡ

19Tmk_Santvana_Cong
Published on

sತುಮಕೂರು: ಹೆಣ್ಣು ಮಕ್ಕಳ ರಕ್ಷಣೆಗೋಸ್ಕರ ಆರಂಭವಾದ ಸಾಂತ್ವನ ಕೇಂದ್ರ, ಮಾತೃಶ್ರೀ ಯೋಜನೆ ಹಾಗೂ ಮಾತೃವಂದನಾ ಯೋಜನೆಗಳನ್ನು ಸ್ಥಗಿತಗೊಳಿಸದಂತೆ ಮಹಿಳಾ ಕಾಂಗ್ರೆಸ್ ಘಟಕದ ಜಿಲ್ಲಾಧ್ಯಕ್ಷೆ ಗೀತಾ ರುದ್ರೇಶ್ ನೇತೃತ್ವದ ನಿಯೋಗವು ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು ಮನವಿ ಸಲ್ಲಿಸಿತು.

ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ, ಆತ್ಮಸ್ಥೈರ್ಯ ತುಂಬಲು ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಯಿತು. ಈಗ ರಾಜ್ಯದಲ್ಲಿ 196 ಸಾಂತ್ವನ ಕೇಂದ್ರಗಳು ಇವೆ. ಜಿಲ್ಲಾ ಮತ್ತು ನಗರ ಕೇಂದ್ರಗಳಲ್ಲಷ್ಟೇ ಅಲ್ಲದೇ ಪ್ರತೀ ತಾಲೂಕಿನಲ್ಲಿ ಒಂದೊಂದು ಕೇಂದ್ರಗಳಿವೆ. ನೊಂದ ಮಹಿಳೆಯರ ಪಾಲಿಗೆ ಸಾಂತ್ವನ ಹೇಳುವ ಕೇಂದ್ರಗಳಾಗಿದ್ದು ಇದನ್ನು ಮುಚ್ಚದಂತೆ ನಿಯೋಗ ಆಗ್ರಹಿಸಿದೆ.

ಮಾತೃಶ್ರೀ ಯೋಜನೆ, ಮಾತೃವಂದನಾ ಯೋಜನೆಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿ ಆದೇಶ ಹೊರಡಿಸಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದು ದುರಂತ. ಈ ಯೋಜನೆಗಳ ವಿಲೀನ ಮಾಡಲಾಗುತ್ತಿದ್ದೆಯೆಂದು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಸಚಿವರು ಹೇಳುತ್ತಿದ್ದು, ವಿಲೀನವೂ ಇಲ್ಲ, ಯಾವುದೂ ಇಲ್ಲ, ಈ ಯೋಜನೆ ನಿಲ್ಲಬಾರದು ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು ಮೂಲಕ ಸರ್ಕಾರಕ್ಕೆ ನಿಯೋಗವು ಮನವಿ ರವಾನಿಸಿತು. ಕೆಪಿಸಿಸಿ ವಕ್ತಾರ ಮುರಳೀಧರಹಾಲಪ್ಪ, ಜಿಲ್ಲಾ ಉಪಾಧ್ಯಕ್ಷೆ ಮರಿಚನ್ನಮ್ಮ, ತಾಲೂಕು ಅಧ್ಯಕ್ಷೆ ಮಂಜುಳಾ ಆರಾಧ್ಯ, ಟಿ.ಎಸ್.ವೀಣಾ,

ಎಸ್.ವಿ.ಗೀತಾ, ಕಮಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net