ಸಾಂತ್ವನ ಕೇಂದ್ರಗಳ ಮುಂದುವರಿಸಲು ಕ್ರಮ ; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಭರವಸೆ

14cmy5
Published on

ಚಿಂತಾಮಣಿ : ರಾಜ್ಯದಲ್ಲಿರುವ ಸಾಂತ್ವನ ಕೇಂದ್ರಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲು ರಾಜ್ಯ ಸರ್ಕಾರದ ಇಲಾಖೆ ಅಧಿಕಾರಿಗಳಲ್ಲಿ, ಇಲಾಖೆ ಮಂತ್ರಿಗಳಲ್ಲಿ ಹಾಗೂ ಮುಖ್ಯ ಮಂತ್ರಿಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ತಿಳಿಸಿದರು.

ಶಿಡ್ಲಘಟ್ಟ ಹಾಗೂ ಚಿಂತಾಮಣಿ ಸಾಂತ್ವನ ಕೇಂದ್ರಗಳನ್ನು ಬುಧವಾರ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಸಾಂತ್ವನ ಕೇಂದ್ರಗಳು ನೊಂದ ಮಹಿಳೆಯರಿಗಾಗಿ ಉತ್ತಮ ಕಾರ್ಯಮಾಡುತ್ತಿವೆ ಎಂದರು. ಸೌಂದರ್ಯ ಗ್ರಾಮೀಣ ಹಾಗೂ ಪಟ್ಟಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಹಾಗೂ ರಾಜ್ಯ ಮಹಿಳಾ ಸಾಂತ್ವನ ಕೇಂದ್ರದ ಅಧ್ಯಕ್ಷೆ ಎಂ.ವಿಜಯಾ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಉಸ್ಮಾನ್ ಅಧಿಕಾರಿಗಳು ಹಾಗೂ ಶಿಡ್ಲಘಟ್ಟ, ಚಿಂತಾಮಣಿ ಸಿಡಿಪಿಒನಾಗವೇಣಿ, ಮಹೇಂದ್ರ ಕುಮಾರ್, ಸಾಂತ್ವನ ಕೇಂದ್ರದ ಸಿಬ್ಬಂದಿ ಕಾಮಾಕ್ಷಿ, ವರಲಕ್ಷ್ಮೀ, ಯಶೋದಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net