

ರಾಯಬಾಗ: ಸೊಳ್ಳೆಗಳಿಂದ ಹರಡುವ ಡೆಂ, ಚಿಕೂನ್ಗುನ್ಯಾ ಮತ್ತು ಮಲೇರಿಯಾ ಬಗ್ಗೆ ಶಿಕರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ರೋಗ ಹರಡದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿಸಿಕೊಡಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಂ.ಪಾಟೀಲ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸಭಾಂಗಣದಲ್ಲಿ ಆರೋಗ್ಯ ಇಲಾಖೆ ಹಾಗೂ ಶಿಣ ಇಲಾಖೆಯಿಂದ ಸಮಗ್ರ ರೋಗವಾಹಕ ರೋಗಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳು ಎಂಬ ವಿಷಯದ ಮೇಲೆ ತಾಲೂಕು ಮಟ್ಟದ ವಿಜ್ಞಾನ ಶಿಕರಿಗಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಶಿಣ ಕುರಿತು ತಿಳಿವಳಿಕೆ ಮೂಡಿಸುವಲ್ಲಿ ಶಿಕರ ಪಾತ್ರ ಅತ್ಯಂತ ಪ್ರಮುಖ ಎಂದರು.
ತಾಲೂಕು ಆರೋಗ್ಯ ಶಿಣಾಧಿಕಾರಿ ಶಂಕರಗೌಡ ಪಾಟೀಲ, ಹುಕ್ಕೇರಿ ಆರೋಗ್ಯ ಶಿಣಾಧಿಕಾರಿ ವಿಜಯಕುಮಾರ ಹತ್ತರಗಿ ಮಾತನಾಡಿದರು.
ಬಿಆರ್ಸಿ ಬಸವರಾಜ ಕಾಂಬಳೆ, ನೇತ್ರತಜ್ಞೆ ಡಾ.ವೀಣಾ ಕಾಂಬಳೆ, ದಂತ ವೈದ್ಯ ಡಾ.ಸಿದ್ದಾರ್ಥ ಮಗದುಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್.ಜಕ್ಕಣ್ಣವರ, ಈಶ್ವರ ಕಾಂಬಳೆ, ಎಸ್.ಎಸ್.ಬೆಳ್ಳಿ ಇತರರಿದ್ದರು.