ಸಾಂಕ್ರಾಮಿಕ ರೋಗ ಭೀತಿಯಲ್ಲಿ ಮಕ್ಕಳು

2908kLB09
Published on

ಕಲಬುರಗಿ: ಮಕ್ಕಳ, ಸಾರ್ವಜನಿಕರ ಹಿತಾಸಕ್ತಿ ಕಾಯಬೇಕಾಗಿದ್ದ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧ್ಯಕ್ಷರು, ಸದಸ್ಯರು ನಿರ್ಲಕ್ಷÈ ವಹಿಸಿದ್ದರ ಪರಿಣಾಮ ಆಳಂದ ತಾಲೂಕಿನ ತೆಲಕುಣಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಕೆಸರು ರೊಚ್ಚೆಯಲ್ಲಿ ತಿರುಗಾಡಿ, ನರಕಯಾತನೆ ಅನುಭವಿಸುವಂತಾಗಿದೆ.
ಆಳAದ ತಾಲೂಕು ಕಿಣ್ಣಿ ಸುಲ್ತಾನ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಲಕುಣಿ ಗ್ರಾಮದಲ್ಲಿ ಕಳೆದ ಎರಡ್ಮೂರು ವರ್ಷದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ರಸ್ತೆಯಲ್ಲಿ ಚರಂಡಿ ಮತ್ತು ಮಳೆ ನೀರು ಸಂಗ್ರಹವಾಗಿ ಮಕ್ಕಳು ಓಡಾಡಲು ಆಗುತ್ತಿಲ್ಲ. ಇನ್ನು ಶಾಲೆ ಪಕ್ಕದಲ್ಲೇ ಚರಂಡಿ ನೀರು ಸಂಗ್ರಹವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಯಾಗಿದೆ. ಆದರೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರುಮ್ ಹಾಕಲು ಕೈಲಾಗದ ಪಿಡಿಒ: ತೆಲಕುಣಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸಂಪರ್ಕಿಸುವ ಪುಟ್ಟ ರಸ್ತೆಯಲ್ಲಿ ಕಳೆದ ಹಲವು ವರ್ಷದಿಂದ ಕೆಸರು, ಚರಂಡಿ ಸೃಷ್ಟಿಯಾಗಿದ್ದು, ಗ್ರಾಪಂ ಪಿಡಿಒ, ಅಧ್ಯಕ್ಷರ ಗಮನಕ್ಕೆ ಗ್ರಾಮಸ್ಥರು ತಂದಿದ್ದಾರೆ. ಆದರೆ ಕನಿಷ್ಠ ಒಂದು ಸಣ್ಣ ಫೂಲ್ ಹಾಕಿ, ಮುರುಮ್ ಹಾಕಲು ಕೈಲಾಗದವರಂತೆ ಮಾತನಾಡುತ್ತಿದ್ದಾರೆ. ಜನರು ಈ ಬಗ್ಗೆ ಪ್ರಶ್ನಿಸಿದರೆ ಯಾರಿಗೆ ಹೇಳ್ತೀರಾ ಹೇಳ್ಕೊಳ್ಳಿ ಎಂದು ಧೀಮಾಕಿನ ಮಾತು ಗ್ರಾಪಂ ಪಿಡಿಒ ಮತ್ತು ಅಧ್ಯಕ್ಷ ಆಡುತ್ತಿದ್ದಾರೆ ಎಂದು ಗ್ರಾಮದ ಯುವಕ ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net