ಸಾಂಕ್ರಾಮಿಕ ರೋಗ ತಡೆಗೆ ಬೇಕು ಜನಸಹಕಾರ

ydg5
Published on

ಹುಣಸಗಿ: ಸಾಂಕ್ರಾಮಿಕ ರೋಗಗಳು ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಡುತ್ತವೆ. ಜನರ ಸಹಭಾಗಿತ್ವದೊಂದಿಗೆ ಇವುಗಳ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಸಮುದಾಯ ಆರೋಗ್ಯಾಧಿಕಾರಿ ದೀಪಾ ವಾಲಿ ಹೇಳಿದರು.

ಪಟ್ಟಣದ 3ನೇ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಕರೆದಿದ್ದ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ನಿಯಂತ್ರಣಕ್ಕಾಗಿ ಕೈಗೊಂಡ ಕ್ರಮಗಳಂತೆ ಆರೋಗ್ಯ ಸೇರಿ ವಿವಿಧ ಇಲಾಖೆಗಳು ಡೆಂಘೆ ತಡೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಜನಸಹಕಾರವೂ ಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯ ಸಿದ್ರಾಮಪ್ಪ ಮುದಗಲ್ ಮಾತನಾಡಿ, ಆಹಾರ ಪದ್ಧತಿ, ಮಾನಸಿಕ ಒತ್ತಡ, ಜೀವನ ಶೈಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಗೆ ಜನರು ಬಹುಬೇಗ ತುತ್ತಾಗುತ್ತಿದ್ದಾರೆ. ಆರೋಗ್ಯ ತಪಾಸಣೆಗೆ ಒಳಗಾದರೆ ವೈದ್ಯರು ಕಾಯಿಲೆ ಇದೆ ಎಂದು ಎಲ್ಲಿ ಹೇಳಿಬಿಡುತ್ತಾರೋ ಎಂಬ ಭಯದಿಂದಾಗಿ ಬಹಳಷ್ಟು ಜನರು ತಪಾಸಣೆಗೆ ಹಿಂದೇಟು ಹಾಕುತ್ತಾರೆ. ಹೀಗಾಗಿ ರೋಗ ವಕ್ಕರಿಸಿದ ನಂತರ ಪಡಿಪಾಟಲು ಪಡುವ ಪರಿಸ್ಥಿತಿ ಉಂಟಾಗುತ್ತಿದೆ ಎಂದು ಹೇಳಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳಮಠ ಮಾತನಾಡಿ, ನಾವು ತಿನ್ನುವ ಆಹಾರ ಎಷ್ಟು ಪೌಷ್ಟಿಕವಾಗಿದೆ ಅಥವಾ ನಮ್ಮ ಮಕ್ಕಳಿಗೆ ಕೊಡಿಸುತ್ತಿರುವ ತಿನಿಸು ಅವರ ಆರೋಗ್ಯಕ್ಕೆ ಪೂರಕವೇ ಎಂಬ ಬಗ್ಗೆ ಒಮ್ಮೆಯೂ ಯೋಚಿಸುವುದಿಲ್ಲ. ಹಾಗೆಯೇ ನಮ್ಮ ಆಹಾರ ಪದ್ಧತಿಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ನಾವು ನಿರ್ಲಕ್ಷಿಸಿದ್ದರಿಂದಲೇ ಹಲವು ರೋಗಗಳಿಗೆ ನಾವು ತುತ್ತಾಗುತ್ತಿz್ದೆÃವೆ ಎಂದರು.

ಪಪA ಸದಸ್ಯ ಮಲ್ಲಣ್ಣ ಬಾಕಲಿ, ಮಹಾದೇವಿ ಬೇವಿನಾಳಮಠ, ಚಂದ್ರಶೇಖರ ದೇಸಾಯಿ, ಸಾವಿತ್ರಿ ಚಿನವಾಲ, ಆಶಾ ಸುಗಮಕಾರ ಶಾಂತಮ್ಮ ಕಟ್ಟಿಮನಿ, ಬೋರಮ್ಮ ಯಡಿಯೂರಮಠ, ಯಂಕಮ್ಮ ಎಸ್., ಲಕ್ಷಿö್ಮÃ ಪೂಜಾರಿ, ಚಂದ್ರಕಲಾ, ಚಾಂದಬಿ, ಶರಣಮ್ಮ ಪರಂಪುರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net