ಸಹೋದರಿಯೊಂದಿಗೆ ಸರಸ

h11-Rock Fedric
Published on

ಹುಬ್ಬಳ್ಳಿ: ಪ್ರೀತಿ, ಪ್ರೇಮ ಎಂದು ಓಡಾಡಿಕೊಂಡು ಕೊನೆಗೆ ಮದುವೆ ಮಾಡಿಸಲಿಲ್ಲವೆಂದು ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವಿಡಿಯೋ ಹರಿಬಿಟ್ಟ ಪಾಂಡಿಚೇರಿಯ ಯುವಕನೊಬ್ಬನನ್ನು ಹುಬ್ಬಳ್ಳಿ ಸೈಬರ್ ಅಪರಾಧ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ರಾಜಕೀಯ ಪಕ್ಷವೊಂದರ ಮುಖಂಡ, ಪಾಂಡಿಚೇರಿಯ ರಾಕ್ ಪೆಡ್ರಿಕ್ ಎಂದು ಗುರುತಿಸಲಾಗಿದೆ. ಈತ ಸಂಬಂಧಿಕರೊಬ್ಬರ ಪುತ್ರಿಯನ್ನು ಪ್ರೀತಿಸುತ್ತಿದ್ದ. ಮನೆಯವರು ಮದುವೆ ಮಾಡಿಕೊಡಲಿಲ್ಲ ಎಂದು ಸಿಟ್ಟಾಗಿ ಯುವತಿ ಜತೆಗಿನ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲಾ್ಯಕ್​ವೆುೕಲ್ ಮಾಡುತ್ತಿದ್ದ. ಅಲ್ಲದೆ ತನ್ನ ಮಾತಿಗೆ ಬೆಲೆ ನೀಡದಿದ್ದಾಗ ಕೆಲ ವಿಡಿಯೋ ವೈರಲ್ ಮಾಡಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತ ಯುವತಿ ಕಡೆಯವರು ಹುಬ್ಬಳ್ಳಿ ಧಾರವಾಡ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಯುವತಿಯ ತಂದೆ ಪಾಂಡಿಚೇರಿ ಮೂಲದವರು. ಕೆಲಸದ ನಿಮಿತ್ತ ಹುಬ್ಬಳ್ಳಿಗೆ ಬಂದಿದ್ದರು. ಬಹುತೇಕ ಅವರ ಕುಟುಂಬ ಪಾಂಡಿಚೇರಿಯಲ್ಲಿಯೇ ವಾಸವಾಗಿದೆ. ಆದರೆ, ಈ ಘಟನೆ ನಂತರ ಹುಬ್ಬಳ್ಳಿಯ ಮಂಟೂರ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ.

ತಾಯಿ ಕಡೆಯಿಂದ ದೂರದ ಸಂಬಂಧವೆಂಬ ಕಾರಣಕ್ಕೆ ರಾಕ್ ಪೆಡ್ರಿಕ್ ಯುವತಿ ಜೊತೆ ಒಡನಾಟ ಹೊಂದಿದ್ದ. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆ ಮಾಡಿಕೊಡುವಂತೆ ಅನೇಕ ಸಲ ಕೇಳಿಕೊಂಡಿದ್ದ. ಆದರೆ, ಇವರಿಬ್ಬರದು ಸಹೋದರ ಸಂಬಂಧವಾಗುತ್ತದೆ ಎಂದು ಯುವತಿ ಮನೆಯವರು ನಿರಾಕರಿಸಿದ್ದರು. ಇದರಿಂದ ವ್ಯಗ್ರನಾದ ರಾಕ್ ಫೋಟೋ, ವಿಡಿಯೋ ವೈರಲ್ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸೈಬರ್ ಠಾಣೆ ಇನ್ಸ್​ಪೆಕ್ಟರ್ ಡಿ.ಕೆ. ಪ್ರಭುಗೌಡ ನೇತೃತ್ವದಲ್ಲಿ ಶುಕ್ರವಾರ ಪಾಂಡಿಚೇರಿಗೆ ತೆರಳಿ ಶನಿವಾರ ಆರೋಪಿಯನ್ನು ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net