

ಚಿತ್ರದುರ್ಗ:ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರದಿಂದ ಜಾತಿ,ಆದಾಯ ಪ್ರಮಾಣ ಪತ್ರ ಪಡೆಯಲು ವಿಳಂಬವಾಗುತ್ತಿದ್ದು,ಸಾ ರ್ವಜನಿಕರ ಹಿತದೃಷ್ಟಿಯಿಂದ ಜಿಲ್ಲಾ ಮತ್ತು ತಾಲೂಕು ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ. ಪರೀಕ್ಷೆ ಹಾಗೂ ನೇಮಕ ಉದ್ದೇ ಶಗಳಿಗಾಗಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅವಶ್ಯವಿರುವ ವಿದ್ಯಾರ್ಥಿಗಳು,ಅಭ್ಯರ್ಥಿಗಳು ಸಹಾಯವಾಣಿ ಮೂಲಕ ತಮ್ಮ ಸ ಮಸ್ಯೆಗಳನ್ನು ದಾಖಲಿಸಬಹುದು.
ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ ಸಂಖ್ಯೆ 8277862928,ಚಿತ್ರದುರ್ಗ ತಾಲೂಕು ಕಚೇರಿ 7353829559, ಚಳ್ಳಕೆರೆ-916406 4797,ಹಿರಿಯೂರು-9449210282,ಹೊಸದುರ್ಗ-9611460183,ಹೊಳಲ್ಕೆರೆ-7019732031 ಹಾಗೂ ಮೊಳಕಾಲ್ಮೂರು ತಾಲೂ ಕು ಕಚೇರಿ-9448948032ಕ್ಕೆ ಕರೆ ಮಾಡಬಹುದು. ಸ್ವೀಕೃತ ಕರೆಗಳಿಗೆ ಕೂಡಲೇ ಸ್ಪಂದಿಸಿ ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.