ಸಹಾಯಧನ ಹೆಚ್ಚಿಸಿದ ಹಿರಾ ಶುಗರ್ಸ್

24-11
ಸಂಕೇಶ್ವರದ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಅಪ್ಪಣಗೌಡರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಚೇರ್ಮನ್ ನಿಖಿಲ ಕತ್ತಿ ಮಾತನಾಡಿದರು. ಶಿವಲಿಂಗೇಶ್ವರ ಸ್ವಾಮೀಜಿ, ರಾಜೇಂದ್ರ ಪಾಟೀಲ, ಶಿವಪುತ್ರ ಶಿರಕೋಳಿ, ಅಶೋಕ ಪಟ್ಟಣಶೆಟ್ಟಿ ಇತರರು ಇದ್ದರು.
Published on

ಹುಕ್ಕೇರಿ, ಬೆಳಗಾವಿ: ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕರಿಗೆ ಸೇವಾ ನಿವೃತ್ತಿ ದಿನದಂದು ಕಾರ್ಮಿಕರ ಕಲ್ಯಾಣ ನಿಧಿಯಿಂದ ನೀಡಲಾಗುತಿದ್ದ 10,000 ರೂ. ಹಾಗೂ ನಿಧನ ಹೊಂದಿದಲ್ಲಿ ನೀಡಲಾಗುತ್ತಿದ್ದ 12,000ರೂ. ಸಹಾಯಧನವನ್ನು ಕ್ರಮವಾಗಿ 20,000 ರೂ. ಹಾಗೂ 25,000 ರೂ.ಗೆ ಹೆಚ್ಚಿಸಿ ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ಚೇರ್ಮನ್ ನಿಖಿಲ ಕತ್ತಿ ಹೇಳಿದರು.

ಸಂಕೇಶ್ವರ ಪಟ್ಟಣದ ಕಾರ್ಖಾನೆಯ ಸಭಾಗೃಹದಲ್ಲಿ ಭಾನುವಾರ ಆಯೋಜಿಸಿದ್ದ ಲಿಂ.ಅಪ್ಪಣಗೌಡ ಪಾಟೀಲ ಅವರ 48ನೇ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಮುಖ್ಯ ರೂವಾರಿ ಅಪ್ಪಣಗೌಡ ಪಾಟೀಲರ ಪುಣ್ಯತಿಥಿ ಸ್ಮರಣಾರ್ಥ ದೀಪಾವಳಿ ಕೊಡುಗೆಯಾಗಿ ಕಾರ್ಖಾನೆ ಕಾರ್ಮಿಕರಿಗೆ ಘೋಷಿಸುತ್ತಿದ್ದ ಬೋನಸ್‌ನ್ನು ಈ ವರ್ಷ ಮುಂಚೆಯೇ ಪಾವತಿಸಲಾಗಿದೆ ಎಂದರು.

ಕಾರ್ಖಾನೆಯ ಇಥೆನಾಲ್ ಘಟಕವನ್ನು ಶೀಘ್ರದಲ್ಲಿ ಪ್ರಾರಂಭಿಸುವ ಮೂಲಕ ಸಹಕಾರ ಮಹರ್ಷಿ ದಿ.ಅಪ್ಪಣಗೌಡರ ಕನಸು ನನಸು ಮಾಡಲಾಗುತ್ತದೆ. ಪ್ರಸಕ್ತ ಹಂಗಾಮಿನಲ್ಲಿ ಸುಮಾರು 12 ಲಕ್ಷ ಮೆ.ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದೆ. ಕಾರ್ಖಾನೆ ಸದಸ್ಯರು ಹಾಗೂ ಕಬ್ಬು ಬೆಳೆಗಾರರು ತಮ್ಮ ಕಾರ್ಖಾನೆಗೆ ಕಬ್ಬು ಪೂರೈಸುವಂತೆ ಮನವಿ ಮಾಡಿಕೊಂಡರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಅಪ್ಪಣಗೌಡರ ಜನೋಪಕಾರಿ ಕಾರ್ಯಗಳನ್ನು ಸ್ಮರಿಸಿದರು. ಹಿರಿಯ ನಿರ್ದೇಶಕ ಶಿವನಾಯಿಕ ನಾಯಿಕ ಮಾತನಾಡಿ, ಸಹಕಾರ ಮಹರ್ಷಿ ಎನಿಸಿಕೊಂಡ ದಿ.ಅಪ್ಪಣಗೌಡರ ಕೆಲಸಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಪುಣ್ಯಸ್ಮರಣೆ ಸಹಕಾರಿಯಾಗಿದೆ ಎಂದರು. ನಿರ್ದೇಶಕರಾದ ಶಿವಪುತ್ರ ಶಿರಕೋಳಿ, ಅಶೋಕ ಪಟ್ಟಣಶೆಟ್ಟಿ, ಬಾಬಾಸಾಹೇಬ ಅರಬೋಳೆ, ಪ್ರಭುದೇವ ಪಾಟೀಲ, ಸುರೇಶ ಬೆಲ್ಲದ, ಬಸಪ್ಪ ಮರಡಿ, ಬಸವರಾಜ ಕಲ್ಲಟ್ಟಿ, ಸುರೇಂದ್ರ ದೊಡ್ಡಲಿಂಗನವರ, ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಕರ್ಕಿನಾಯಿಕ, ಸಂಗಮ ಕಾರ್ಖಾನೆ ಚೇರ್ಮನ್ ರಾಜೇಂದ್ರ ಪಾಟೀಲ, ಮಾಜಿ ನಿರ್ದೇಶಕರಾದ ಉದಯ ದೇಸಾಯಿ, ಡಾ.ಅಶೋಕ ಪಾಟೀಲ, ಗಜಾನನ ಕೊಳ್ಳಿ, ಸುನೀಲ ಪರ್ವತರಾವ, ಸತ್ತೆಪ್ಪ ನಾಯಿಕ, ಕಲಗೌಡ ಪಾಟೀಲ, ರಾಚಯ್ಯ ಹಿರೇಮಠ, ರವಿ ಹಿಡಕಲ, ಬಸಗೌಡ ಮಗೆನ್ನವರ, ರಾಯಪ್ಪ ಡೂಗ, ಮಹಾನಿಂಗ ಸನದಿ, ರಮೇಶ ಕುಲಕರ್ಣಿ, ಸುನೀಲ ನೇರ್ಲಿ, ಕಾರ್ಯಾಲಯ ಅಧೀಕ್ಷಕ ಸುಭಾಸ ನಾಶಿಪುಡಿ, ಕಾರ್ಖಾನೆ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net