ಸಹಾಯಕ ಮೇಲ್ವಿಚಾರಕ ಹುದ್ದೆಗೆ ಅರ್ಜಿ

Application-1-1280x720
Published on

ಚಿತ್ರದುರ್ಗ:ರಾಷ್ಟ್ರೀಯ ಸೈನಿಕ ಸ್ಮಾರಕದ ಸಹಾಯಕ ಮೇಲ್ವಿಚಾರಕ ಹುದ್ದೆಗೆ ಅರ್ಜಿ ಆಹ್ವಾಸಲಾಗಿದೆ. ಸೇನೆಯಲ್ಲಿ ಜೆಸಿಒ ರ‌್ಯಾಂಕ್ ನಿಂದ ನಿವೃತ್ತ ಹೊಂದಿದ 55 ವರ್ಷದೊಳಗಿನ ಮಾಜಿ ಸೈನಿಕರು ಏ.10ರೊಳಗೆ ಅರ್ಜಿ ಸಲ್ಲಿಸಬಹುದು. ಕನ್ನಡ ಮಾತನಾಡಲು,ಓದಲು, ಬರೆಯಲು ಹಾಗೂ ಗಣಕ ಯಂತ್ರದಲ್ಲಿ ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ಪತ್ರ ಬರೆಯುವ ಕೌಶಲವಿರಬೇಕು. ಈ ಹುದ್ದೆಗೆ ಹೊರಗುತ್ತಿ ಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗುತ್ತದೆ. ಕನಿಷ್ಠ ವೇತನ 25 ಸಾವಿರ ರೂ.ಗಳಿಂದ ಗರಿಷ್ಠ 30 ಸಾವಿರ ರೂ.ಅರ್ಜಿ ನಮೂನೆಯನ್ನು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ವೆಬ್‌ಸೈಟ್ http://sainikwelfare.karnataka.gov.in ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು dirdswrblr@gmail.com ಮೂಲಕ ಅಥವಾ ಅಂಚೆಯಲ್ಲಿ ಕಳುಹಿಸಬಹುದು. ಹೆಚ್ಚಿನ ಮಾಹಿತಿ ಗಾಗಿ ದೂರವಾಣಿ ಸಂಖ್ಯೆ 080-25589459 ಸಂಪರ್ಕಿಸ ಬಹು ದೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net