ಸಹಾಯ ಮನೋಭಾವ ಬೆಳೆಸಿಕೊಳ್ಳಿ

25blrp2
Published on

ಬೇಲೂರು: ಇನ್ನೊಬ್ಬರಿಂದ ಸಹಾಯ ಪಡೆದವರು ಉತ್ತಮ ಸ್ಥಾನಕ್ಕೆ ಹೋದ ನಂತರ ತಾವು ಸಹ ಸಮಾಜಕ್ಕೆ ಹಾಗೂ ಇತರರಿಗೆ ಸಾಧ್ಯವಾಷ್ಟು ಸಹಾಯ ಮಾಡುವ ಮೂಲಕ ಸ್ವಾಭಿಮಾನ ಮೆರೆಯಬೇಕು ಎಂದು ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಶಿವು ಮುರೇಹಳ್ಳಿ ತಿಳಿಸಿದರು.


ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಮುರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭೀಮ್ ಆರ್ಮಿಯಿಂದ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸಮಾಜದಲ್ಲಿ ಸಹಾಯ ಮನೋಭಾವವನ್ನು ಬೆಳೆಸಿಕೊಳ್ಳುವುದು ಬಹುಮುಖ್ಯ. ನಮ್ಮಿಂದ ಸಾಧ್ಯವಾದಷ್ಟು ಅವಶ್ಯಕತೆ ಇರುವವರಿಗೆ ಸಹಾಯ ಮಾಡೋಣ ಹಾಗೂ ಸಹಾಯ ಪಡೆದವರು ಮುಂದಿನ ದಿನಗಳಲ್ಲಿ ಒಂದೊಳ್ಳೆ ಸ್ಥಾನಕ್ಕೆ ಹೋದ ನಂತರ ಇತರರಿಗೂ ತಮ್ಮಿಂದಾಗುವ ಸಹಾಯ ಮಾಡುವ ಮೂಲಕ ಅವರು ಮತ್ತೊಬ್ಬರಿಗೆ ಸಹಕಾರ ನೀಡುವಂತೆ ಮಾಡಬೇಕು. ಆಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದರು.


ಮುರೇಹಳ್ಳಿ ಗ್ರಾಪಂ ಸದಸ್ಯ ಯೋಗೇಶ್, ಸಮಾಜ ಸೇವಕ ಮನು, ಎಸ್‌ಡಿಎಂಸಿ ಅಧ್ಯಕ್ಷ ರವಿ, ಮುಖ್ಯ ಶಿಕ್ಷಕ ಶ್ರೀವತ್ಸವ್, ಶಿಕ್ಷಕ ಪುಟ್ಟರಾಜು, ಭೀಮ್ ಆರ್ಮಿ ಮುಖಂಡರಾದ ಕೃಷ್ಣಮೂರ್ತಿ, ಚಂದ್ರಶೇಖರ್, ಅವಿನಾಶ್, ಅಮೃತ್, ಮೂರ್ತಿ, ಪ್ರದೀಪ್, ಉಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net