ಸಹಾಯ ಧನಕ್ಕಾಗಿ ಅರ್ಜಿ ಅಹ್ವಾನ

Published on

ಹೊಸಪೇಟೆ: ಈ ಸಾಲಿನ ಆಹಾರ ಮತ್ತು ಪೌಷ್ಠಿಕ ಭದ್ರತೆ ಯೋಜನೆ ದ್ವಿದಳ ಧಾನ್ಯ ಕಾರ್ಯಕ್ರಮದಡಿ ಸಿರಿಧಾನ್ಯಗಳ ಕಿಚನ್ ಸ್ಥಾಪನೆಗೆ ಸಂಸ್ಕರಣೆ ಘಟಕಗಳ ಅಳವಡಿಕೆ, ಮಾರುಕಟ್ಟೆ ಬೆಂಬಲ ಮತ್ತು ಸಂಸ್ಕರಣಾ ಕ್ಲಸ್ಟರ್ ಸ್ಥಾಪನೆಗೆ ಸಹಾಯಧನಕ್ಕಾಗಿ ರೈತರು, ರೈತ ಉತ್ಪಾದಕರ ಸಂಸ್ಥೆಗಳ, ಸ್ವಸಹಾಯ ಗುಂಪುಗಳಿAದ ಅರ್ಜಿಗಳನ್ನು ಅಹ್ವಾನಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಜ.05ರೊಳಗೆ ಅರ್ಜಿಗಳನ್ನು ಸಲ್ಲಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net