

ಬೇಲೂರು: ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಸೌಮ್ಯಾ ನಾಯಕಿ ಅಮ್ಮನವರ ಸನ್ನಿಧಾನದಲ್ಲಿ ಶುಕ್ರವಾರ ಹಿಂದು ಧಾರ್ಮಿಕ ವಿಧಿ ವಿಧಾನದಂತೆ ಮಹಿಳೆಯರು ಅರ್ಚಕರ ಸಮ್ಮುಖದಲ್ಲಿ ಸಹಸ್ರನಾಮ ಕುಂಕುಮಾರ್ಚನೆ ನೆರವೇರಿಸಿದರು.
ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮಾತನಾಡಿ, ಲಲಿತಾ ಪಂಚಮಿ ಅಂಗವಾಗಿ ಧಾರ್ಮಿಕ ದತ್ತಿ ಇಲಾಖೆ ಆದೇಶದಂತೆ ಲೋಕ ಕಲ್ಯಾಣಾರ್ಥವಾಗಿ ಸಹಸ್ರನಾಮ ಕುಂಕುಮಾರ್ಚನೆಯನ್ನು ಮಹಿಳೆಯರು ಮಾಡಿದ್ದಾರೆ ಎಂದರು.
ಅರ್ಚಕರಾದ ಶ್ರೀನಿವಾಸ್, ಕೆ.ಆರ್.ಮಂಜುನಾಥ್, ರವೀಂದ್ರ, ದೇಗುಲದ ಇಒ ವಿದ್ಯುಲತಾ ಇತರರಿರಿದ್ದರು.