ಸಹನಾ ಸಾಧನೆ ಇತರರಿಗೆ ಪ್ರೇರಣೆ

14srt-2
Published on

ಶಿರಹಟ್ಟಿ: ಪಿಎಸ್​ಐ ನೇಮಕಾತಿ ಮಹಿಳಾ ಮೀಸಲಾತಿ ಪಟ್ಟಿಯಲ್ಲಿ ರಾಜ್ಯಕ್ಕೆ 26ನೇ ರ್ಯಾಂಕ್ ಪಡೆದ ಸಹನಾ ಪಾಟೀಲ ಅವರನ್ನು ತೆಗ್ಗಿನಭಾವನೂರಲ್ಲಿ ಮಾಚೇನಹಳ್ಳಿ ಗ್ರಾಮಸ್ಥರು ಸನ್ಮಾನಿಸಿದರು.

ಗ್ರಾಪಂ ಮಾಜಿ ಸದಸ್ಯ ಶಂಕರ ಮರಾಠೆ ಮಾತನಾಡಿ, ಪಿಎಸ್​ಐ ನೇಮಕಾತಿಯಲ್ಲಿ ರಾಜ್ಯಕ್ಕೆ 26ನೇ ರ್ಯಾಂಕ್ ಪಡೆದ ಸಹನಾ ಪಾಟೀಲ ಅವರು ತಮ್ಮ ತೆಗ್ಗಿನಭಾವನೂರ ಗ್ರಾಮ, ಶಿರಹಟ್ಟಿ ತಾಲೂಕಿನ ಕೀರ್ತಿ ಹೆಚ್ಚಿಸಿದ್ದಾರೆ. ಅವರ ಛಲ, ಶ್ರಮ ಸಾರ್ಥಕವಾಗಿದೆ. ಅವರ ಸಾಧನೆ ಇತರರಿಗೆ ಪ್ರೇರಣೆಯಾಗಿದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಹನಾ ಪಾಟೀಲ, ಗ್ರಾಮಸ್ಥರು ತೋರಿದ ಆದರಕ್ಕೆ ಚಿರಋಣಿ. ಪೊಲೀಸ್ ಅಧಿಕಾರಿಯಾಗಿ ಸಮಾಜಮುಖಿ ಸೇವೆಯಲ್ಲಿ ತೊಡಗುವೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ವೀರಣ್ಣ ಕೆಲೂರ, ಆನಂದ ಮಾಳೇಕೊಪ್ಪ, ರಘು ಪಾಟೀಲ, ವೆಂಕಣ್ಣ ಕಲಿವಾಳ, ಸಣ್ಣ ಹನುಮಪ್ಪ ಕಮತ, ಖಾದರಸಾಬ್ ಕೋಟಿಹಾಳ, ವೆಂಕನಗೌಡ ಪಾಟೀಲ, ಫಾರೂಕ್ ಕೋಟಿಹಾಳ, ಸಹನಾ ಪಾಟೀಲ ಕುಟುಂಬಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net