

ಮುನವಳ್ಳಿ, ಬೆಳಗಾವಿ: ಪಟ್ಟಣದ ದಿ.ಮುನವಳ್ಳಿ ಅರ್ಬನ್ ಕೋ ಆಪ್. ಕ್ರೆಡಿಟ್ ಸೊಸೈಟಿಯ 30ನೇ ವಾರ್ಷಿಕ ಮಹಾಸಭೆ ಬುಧವಾರ ಸಂಘದ ಸಭಾಂಗಣದಲ್ಲಿ ಜರುಗಿತು.
ಸಂಸ್ಥೆಯ ಅಧ್ಯಕ್ಷ ರವೀಂದ್ರ ಯಲಿಗಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಸಂಘ ಸಂಸ್ಥೆಗಳು ಹುಟ್ಟುವುದು ಸುಲಭದ ಕೆಲಸ. ಆದರೆ, ಅವುಗಳನ್ನು ಬೆಳೆಸಿ ಉಳಿಸಿಕೊಂಡು ಹೋಗುವುದು ಕಷ್ಟದ ಕೆಲಸವಾಗಿದೆ. ಸಹಕಾರಿ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಬಹಳ ಮುಖ್ಯವಾಗಿದ್ದು, ಗ್ರಾಹಕರ ಹಿತಾಸಕ್ತಿ ಕಾಯುವುದು ಪ್ರಮುಖವಾಗಿದೆ. ಬರುವ ದಿನಮಾನಗಳಲ್ಲಿ ಸಂಘದ ಯಕ್ಕುಂಡಿ, ಯರಗಟ್ಟಿ ಶಾಖೆಗಳನ್ನು ಇನ್ನಷ್ಟು ಬಲಪಡಿಸುವ ಕಾರ್ಯ ಮಾಡಲಾಗುವುದು ಎಂದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ವಿರಾಜ ಕೊಳಕಿ ವಾರ್ಷಿಕ ವರದಿ ವಾಚಿಸಿ, ಸಂಘವು 3,047 ಸದಸ್ಯರನ್ನು ಹೊಂದಿದ್ದು, ಸಂಘ ಕ್ಷಿಪ್ರವಾಗಿ ಪ್ರಗತಿ ಹೊಂದುತ್ತಿದೆ. ಷೇರು ಸದಸ್ಯರಿಗೆ ಶೇ. 10 ಡಿವಿಡೆಂಡ್ ಹಂಚಲಾಗುವುದು ಎಂದರು. ಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕರಾಗಿ ಬೆಳಗಾವಿ ಪ್ರಾಂತದಿಂದ ಅವಿರೋಧವಾಗಿ ಆಯ್ಕೆಯಾದ ಸಂಘದ ಅಧ್ಯಕ್ಷ ರವೀಂದ್ರ ಯಲಿಗಾರ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ವಕೀಲರಾದ ವಿ.ಎಸ್.ಯಕ್ಕುಂಡಿ, ಬಸವರಾಜ ಹೊಂಗಲ, ಎಂ.ಆರ್.ಗೋಪಶೆಟ್ಟಿ, ವೀರಣ್ಣ ಕಮ್ಮಾರ, ಅರುಣ ಬಾಳಿ, ಸಂಘದ ನಿರ್ದೇಶಕರಾದ ಶಂಕರ ಶೀಲವಂತ, ನಾಗಪ್ಪ ಯಲಿಗಾರ, ನಾಗಪ್ಪ ಕಾಮಣ್ಣವರ, ಅಮಿತ ಕರೀಕಟ್ಟಿ, ಜಯದೇವ ಅಷ್ಟಗಿಮಠ, ಅಂಬರೀಷ ಯಲಿಗಾರ, ಫಕೀರಪ್ಪ ಹದ್ದನ್ನವರ, ಎ.ಎಸ್.ಗಾಣಗಿ, ಸಿ.ಬಿ.ಅಂಗಡಿ, ಎಂ.ಎ.ಭಾಗವಾನ, ಬಿ.ಎಸ್.ಪಠಾಣಿ, ಆರ್.ಎಲ್.ಗೌಡರ, ಎಸ್.ಎಸ್.ಪಾಟೀಲ, ಎಂ.ಎಂ.ಮುಲ್ಲಾ, ಡಿ.ಆರ್.ಪಾಟೀಲ, ಮೋಹನ ಸರ್ವಿ, ಶಾಖಾ ವ್ಯವಸ್ಥಾಪಕ ಶಿವಾನಂದ ಮದ್ದಾನಿ, ಶಿವಾನಂದ ವಾಲಿ, ನಿಶಾಂತ ಕೋರಿ, ರುದ್ರಯ್ಯ ಚುಳಕಿಮಠ, ಪಂಚಪ್ಪ ಮಾಟನವರ, ಚಂದ್ರಶೇಖರ ಕುಂಬಾರ, ಈಶ್ವರ ಶಿವಪೇಟಿ, ರವಿ ಮೂಲಿಮನಿ ಇತರರು ಇದ್ದರು.