

ಹುಕ್ಕೇರಿ: ತಾಲೂಕಿನಲ್ಲಿ 88 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿದ್ದು, ಅವುಗಳಲ್ಲಿ 67 ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಇದು ತಾಲೂಕಿನ ಸಹಕಾರಿ ಕ್ಷೇತ್ರ ಸದೃಢವಾಗಿದೆ ಎಂಬುದನ್ನು ತೋರಿಸುತ್ತಿದೆ ಎಂದು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಪಟ್ಟಣದ ವಿಶ್ವರಾಜ ಸಭಾಭವನದಲ್ಲಿ ತಾಲೂಕಿನ ಎಲ್ಲ ಪಿಕೆಪಿಎಸ್‌ಗಳಿಂದ ಭಾನುವಾರ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಮಾತನಾಡಿ, ಸಹಕಾರಿ ಸಂಘಗಳನ್ನು ಹುಟ್ಟು ಹಾಕಿದ ಬಹಳಷ್ಟು ಜನಪ್ರತಿನಿಗಳಲ್ಲಿ ಅನಕ್ಷರಸ್ಥರೂ ಇದ್ದಾರೆ. ಅವರಲ್ಲಿ ಸ್ವಾರ್ಥರಹಿತ ಸೇವಾ ಮನೋಭಾವವಿತ್ತು. ಈಗ ಕುರ್ಚಿ ಮತ್ತು ಅಕಾರ ದಾಹ ಹೆಚ್ಚಾಗಿದೆ. ಇದರಿಂದ ಸಹಕಾರಿ ಕ್ಷೇತ್ರ ಹಾಳಾಗುತ್ತಿದೆ. ನಿಸ್ವಾರ್ಥದಿಂದ ಆಡಳಿತ ನಡೆಸಿ ಸಹಕಾರಿ ಮುನ್ನಡೆಸಿರಿ ಎಂದರು.
ಶಾಸಕ ನಿಖಿಲ ಕತ್ತಿ, ಸಂಗಮ ಶುಗರ್ಸ್ ಅಧ್ಯಕ್ಷ ರಾಜೇಂದ್ರ ಪಾಟೀಲ ಮಾತನಾಡಿ,ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಬೆಳಗಾವಿ ಜಿಲ್ಲೆ ಉತ್ತಮ ಆಡಳಿತ ನೀಡಿದರೆ, ಹುಕ್ಕೇರಿ ಮೊದಲ ಸ್ಥಾನದಲ್ಲಿದೆ ಎಂದರು.
ತಾಲೂಕಿನ ಎಲ್ಲ ಪಿಕೆಪಿಎಸ್‌ಗಳಿಂದ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರನ್ನು ಸತ್ಕರಿಸಲಾಯಿತು. ಅಪ್ಪಾಸಾಹೇಬ ಶಿರಕೋಳಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸಂಘ ಸಂಸ್ಥೆಗಳ ಪದಾಕಾರಿಗಳಾದ ಬಸವರಾಜ ಮರಡಿ, ಪ್ರಭುದೇವ ಪಾಟೀಲ, ಕಲಗೌಡ ಪಾಟೀಲ, ಮಹಾವೀರ ನಿಲಜಗಿ, ಬಾಳಾಸಾಹೇಬ ನಾಯಿಕ, ಗಜಾನನ ಕೊಳ್ಳಿ, ಸುನೀಲ ಪರ್ವತರಾವ, ಎ.ಕೆ.ಪಾಟೀಲ, ದುರದುಂಡಿ ಪಾಟೀಲ, ಸತ್ಯೆಪ್ಪ ನಾಯಿಕ, ಜಯಗೌಡ ಪಾಟೀಲ, ಬಂಡು ಹತನೂರಿ, ಬಸವರಾಜ ಸುಲ್ತಾನಪೂರಿ, ಎ.ಎಸ್.ಪದ್ಮನ್ನವರ ಇತರರಿದ್ದರು.