ಸಹಕಾರದಿಂದ ಕೋವಿಡ್ ಸೋಂಕು ನಿಯಂತ್ರಣ

03Huk1-Web
ಹುಕ್ಕೇರಿ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಭೆ ನಂತರ ಸುದ್ದಿಗೋಷ್ಠಿ ಉದ್ದೇಶಿಸಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ ಮಾತನಾಡಿದರು. ತಹಸೀಲ್ದಾರ್ ಡಾ.ಡಿ.ಎಚ್.ಹೂಗಾರ, ಬಿ.ಕೆ.ಲಾಳಿ, ರಮೇಶ ಛಾಯಾಗೋಳ ಇದ್ದರು.
Published on

ಹುಕ್ಕೇರಿ: ವಕೀಲರು, ಖಾಸಗಿ ಆರ್ಥಿಕ ಸಂಸ್ಥೆಗಳು ಹಾಗೂ ಪಿಕೆಪಿಎಸ್ ಸೇರಿದಂತೆ ಜನ ಸಂಪರ್ಕಕ್ಕೆ ಬರುವವರಿಗೆ ಕರೊನಾ ಲಸಿಕೆ ವಿತರಣೆಯಲ್ಲಿ ಮೊದಲ ಆದ್ಯತೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಶುಕ್ರವಾರ ಬೆಳಗಾವಿಯಲ್ಲಿ ಒತ್ತಾಯಿಸಲಾಗುವುದು ಎಂದು ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು.


ಪಟ್ಟಣದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಚಿವ ಉಮೇಶ ಕತ್ತಿ ವಿಶೇಷ ಮುತುವರ್ಜಿಯಿಂದ ಹುಕ್ಕೇರಿ ತಾಲೂಕಿನಲ್ಲಿ ಕರೊನಾ ಸೋಂಕಿನ ಪ್ರಮಾಣ ನಿಯಂತ್ರಣದಲ್ಲಿದೆ. ಜನರು ಮಾರ್ಗಸೂಚಿ ಪಾಲಿಸುತ್ತಿದ್ದಾರೆ. ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಹುಕ್ಕೇರಿ ತಾಲೂಕಾಡಳಿತ ಕೈಗೊಂಡ ಕ್ರಮ ಇತರ ಜಿಲ್ಲೆಗಳಿಗೂ ಮಾದರಿಯಾಗಿದೆ ಎಂದು ಪ್ರಶಂಸಿಸಿದರು.

ಮುಖಂಡ ಪರಗೌಡ ಪಾಟೀಲ, ತಾಪಂ ಇಒ ಬಿ.ಕೆ.ಲಾಳಿ, ಸಿಪಿಐ ರಮೇಶ ಛಾಯಾಗೋಳ, ಟಿಎಚ್‌ಒ ಉದಯ ಕುಡಚಿ, ಸಿಡಿಪಿಒ ಮಂಜುನಾಥ ಪರಸಣ್ಣವರ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ, ಜಗದೀಶ ಈಟಿ, ಕಂದಾಯ ಇಲಾಖೆ ಅಧಿಕಾರಿ ಪ್ರವೀಣ ಮಾಳಾಜ, ಶ್ರೀಶೈಲ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net