ಸಹಕಾರ ಸಂಘದಿಂದ 5.20 ಕೋಟಿ ರೂ. ಬೆಳೆ ಸಾಲ ವಿತರಣೆ

Nuggehalli 01
ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 61 ರೈತರಿಗೆ 25 ಲಕ್ಷ ರೂ. ಸಾಲ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು. ಎನ್.ಬಸವರಾಜ್, ಟಿ.ವಿ.ಬಸವರಾಜ್, ಎಚ್.ಆರ್.ಗಿರೀಶ್ ಇದ್ದರು.
Published on

ನುಗ್ಗೇಹಳ್ಳಿ: ತಗಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 920 ರೈತರಿಗೆ 5.20 ಕೋಟಿ ರೂ. ಬೆಳೆ ಸಾಲ ವಿತರಿಸಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಹೋಬಳಿಯ ತಗಡೂರು ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 61 ರೈತರಿಗೆ 25 ಲಕ್ಷ ರೂ. ಸಾಲ, 9 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ 44 ಲಕ್ಷ ರೂ. ಸಾಲ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.
25 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ 1.12 ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಿಸಲಾಗಿದೆ. ಈ ಭಾಗದ ಎಲ್ಲ ಸಮಾಜದ ರೈತರಿಗೂ ಪಕ್ಷಾತೀತವಾಗಿ ಸಾಲ ವಿತರಿಸಲಾಗಿದೆ. 5 ಕೋಟಿ ರೂ. ಸಾಲ ಮನ್ನವಾಗಿರುವುದರಿಂದ ಈ ಭಾಗದ ರೈತರಿಗೂ ಅನುಕೂಲವಾಗಿದೆ ಎಂದರು.

ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ, ತಾ.ಪಂ. ಮಾಜಿ ಸದಸ್ಯ ಎನ್.ಬಸವರಾಜ್, ಪುಟ್ಟಸ್ವಾಮಿ ಕೃಷಿ ಪತ್ತಿನ ಸಂಘದ ಅಧ್ಯಕ್ಷ ಟಿ.ವಿ.ಬಸವರಾಜ್, ಮೇಲ್ವಿಚಾರಕ ಅಭಿಲಾಷ್, ಕಾರ್ಯನಿರ್ವಹಣಾಧಿಕಾರಿ ಎಚ್.ಆರ್.ಗಿರೀಶ್, ಎಲ್.ಕೆ.ರವಿ, ತಮ್ಮಯಣ್ಣ, ಮಹಾಲಿಂಗೇಗೌಡ, ನಿಂಗೇಗೌಡ, ರಂಗೇಗೌಡ, ಶಂಕರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net