ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ

21HAN-2
Published on

ಹನಗೋಡು: ಸಮೀಪದ ಅಬ್ಬೂರು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಶಾಸಕ ಜಿ.ಡಿ.ಹರೀಶ್‌ಗೌಡ ಭರವಸೆ ನೀಡಿದರು.


ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರು ಗ್ರಾಮದಲ್ಲಿ 21 ಲಕ್ಷ ರೂ. ವೆಚ್ಚದಲ್ಲಿ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕುಮಾರ್ ನೇತೃತ್ವದಲ್ಲಿ ಕೆಎಂಎಫ್ ವತಿಯಿಂದ 10 ಲಕ್ಷ ರೂ., ಮೈಸೂರು ಹಾಲು ಒಕ್ಕೂಟದಿಂದ 4 ಲಕ್ಷ ರೂ., ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 2 ಲಕ್ಷ ರೂ. ಅನುದಾನ ದೊರೆಯಲಿದೆ. ಇನ್ನುಳಿದ ಬಾಕಿ ಹಣವನ್ನು ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ ಅಥವಾ ಬೇರೆ ಯೋಜನೆಯಡಿ ಅನುದಾನ ನೀಡಿ ಕಟ್ಟಡವನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದರು.


ಗ್ರಾಮದ ಮುಖ್ಯ ರಸ್ತೆ, ಜನತಾ ಬಡಾವಣೆಯ ಮುಖ್ಯ ರಸ್ತೆ ಹಾಗೂ ಬೀದಿ, ಹೊಳೆ ಹಾಗೂ ಸ್ಮಶಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ರೈತರ ಭೂಮಿ ಸಾಗುವಳಿ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕೆಂಬ ಗ್ರಾಮಸ್ಥರ ಕೋರಿಕೆಯನ್ನು ಹಂತ ಹಂತವಾಗಿ ಪರಿಗಣಿಸಲಾಗುವುದು ಎಂದರು.


ಸಂಘದ ಅಧ್ಯಕ್ಷ ರವಿನಾಯಕ ಮಾತನಾಡಿದರು. ನೆರಳಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಸುರೇಶ್, ಹನಗೋಡು ಗ್ರಾಪಂ ಅಧ್ಯಕ್ಷ ಚೆನ್ನಯ್ಯ, ಮೈಮುಲ್ ವ್ಯವಸ್ಥಾಪಕ ದಿವಾಕರ್, ವಿಸ್ತೀರ್ಣಾಧಿಕಾರಿ ಬಿ.ಗೌತಮ್, ಜಿಪಂ ಮಾಜಿ ಸದಸ್ಯ ಕಟ್ಟನಾಯಕ, ಎಪಿಎಂಸಿ ಮಾಜಿ ಅಧ್ಯಕ್ಷ ಕಿರಂಗೂರು ಬಸವರಾಜ್, ತಾಪಂ ಮಾಜಿ ಸದಸ್ಯ ಗಣಪತಿ, ದೊಡ್ಡಹೆಜ್ಜೂರು ಗ್ರಾಪಂ ಮಾಜಿ ಅಧ್ಯಕ್ಷ ಮುದುಗನೂರು ಸುಭಾಷ್, ದಾ.ರಾ.ಮಹೇಶ್ ಗ್ರಾಪಂ ಸದಸ್ಯರಾದ ಕುಮಾರ್, ಚಂದ್ರಮ್ಮ, ಮುಖಂಡರಾದ ಬೀರೇಗೌಡ, ನಾಗರಾಜಶೆಟ್ಟಿ ರಾಮೇಗೌಡ, ಮಾದನಾಯಕ, ಮುದ್ದೇಗೌಡ, ಪಿಡಿಒ ದೇವರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net