ಸಹಕಾರ ಸಂಘದ ಕಟ್ಟಡ ಕಾಮಗಾರಿಗೆ ಭೂಮಿಪೂಜೆ

4spt1
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ವಿವಿದೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ ನೂತನ ಕಟ್ಟಡ ಕಾಮಗಾರಿಗೆ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಭರತ್, ನಾಗರಾಜ್, ಪುಷ್ಪಾ, ಮಮತಾ ಇತರರು ಇದ್ದರು.
Published on

ಸೋಮವಾರಪೇಟೆ: ಗೌಡಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ, ಗ್ರಾಮೀಣ ಸಹಕಾರ ಸಂಘದ 1.6 ಕೋಟಿ ರೂ. ವೆಚ್ಚದ ನೂತನ ಕಟ್ಟಡ ಕಾಮಗಾರಿಗೆ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಸಹಕಾರ ಸಂಘದ ವ್ಯಾಪ್ತಿಯ ರೈತರ ಸರ್ವತೋಮುಖ ಅಭಿವೃದ್ಧಿಗೆ ಸಂಘ ಶ್ರಮಿಸುತ್ತಿದೆ. 2,494 ಸದಸ್ಯರಿರುವ ಸಂಘ ಪ್ರತಿ ವರ್ಷ ಲಾಭ ಗಳಿಸುತ್ತಿದ್ದು, ಕಳೆದ ಸಾಲಿನಲ್ಲಿ ಶೇ.25 ಲಾಭಾಂಶ ವಿತರಿಸಲಾಗಿದೆ. ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಉತ್ತಮ ಕಾರ್ಯನಿರ್ವಹಣೆಗಾಗಿ ಗೌಡಳ್ಳಿ ಸಂಘಕ್ಕೆ ಮೂರು ಬಾರಿ ದ್ವಿತೀಯ ಬಹುಮಾನ ದೊರೆತ್ತಿದೆ ಎಂದು ಅವರು ಹೇಳಿದರು.

ಕಳೆದ ಮಹಾಸಭೆಯಲ್ಲಿ ಸಂಘದ ಸದಸ್ಯರು ನೂತನ ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ್ದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷವೇ ಕಾಮಗಾರಿ ಪ್ರಾರಂಭಿಸಲಾಗುವುದು. ಸಂಘದ ಮೂರು ಎಕರೆ ಜಾಗದಲ್ಲಿ ಹೊಸದಾಗಿ ಕಾಫಿ ತೋಟ ಮಾಡಲಾಗುವುದು ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಎನ್.ಎಸ್.ಪರಮೇಶ್, ನಿರ್ದೇಶಕರಾದ ಎಸ್.ಬಿ.ಭರತ್‌ಕುಮಾರ್, ವಿ.ಎನ್.ನಾಗರಾಜ್, ಜಿ.ಪಿ.ಸುನಿಲ್, ಎಚ್.ಎಸ್.ಪುಷ್ಪಾ, ಸಿ.ಎ.ಮಮತಾ, ಡಿ.ಪಿ.ಸುಮಿತ್ರಾ, ಟಿ.ಎಸ್.ವಾಣಿ, ಕೆ.ಜಿ.ದಿನೇಶ್, ಸಿ.ಈ.ವೆಂಕಟೇಶ್, ಜಿ.ಈ.ಸುರೇಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೆ.ಕೆ.ಪೊನ್ನಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net