ಸಹಕಾರ ಸಂಘಗಳು ರೈತರ ಜೀವನಾಡಿ -ಸಹಕಾರ ಸಪ್ತಾಹ ಕಾರ್ಯಕ್ರಮ

IMG-20231118-WA0036.jpg
Published on

ದಾವಣಗೆರೆ: ಸಹಕಾರ ಸಂಘಗಳು ರೈತರ ಜೀವನಾಡಿಯಾಗಿದ್ದು ಅನ್ನದಾತರು ಇಲ್ಲಿ ಪಡೆದ ಸಾಲವನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡು ಆರ್ಥಿಕ ಸಬಲರಾಗಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕಿವಿಮಾತು ಹೇಳಿದರು.

ದಾವಣಗೆರೆ ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 70ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರ್ಕಾರ ಸಹಕಾರ ಇಲಾಖೆ ಮೂಲಕ ರೈತರ ಸಬಲೀಕರಣಕ್ಕಾಗಿ ಕೋಟ್ಯಂತರ ರೂ. ನೀಡುತ್ತಿದೆ. ಇಲ್ಲಿ ಸಿಗುವ ಸಾಲ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮನೆಯ ಹೆಣ್ಣುಮಕ್ಕಳು ಕೂಡ ಈ ಬಗ್ಗೆ ನಿಗಾ ವಹಿಸಬೇಕೆಂದು ಹೇಳಿದರು.

ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ದೇಶದ ಪ್ರತಿ ಕ್ಷೇತ್ರಕ್ಕೂ ಸಹಕಾರ ರಂಗ ತಲುಪಿದೆ. ಮಹಿಳೆಯರು ಕೂಡ ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು. ಈ ಕುರಿತು ಸಹಕಾರ ಇಲಾಖೆ ಗಮನ ಹರಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ರಾಮಗೊಂಡನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎ.ಆರ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಸಹಾಯಕ ಪ್ರಧಾನ ವ್ಯವಸ್ಥಾಪಕ ಗುರುರಾಜ ಎನ್.ಅಂಬೇಕರ್, ಸಿರಿಗೆರೆ ರಾಜಣ್ಣ, ಎಚ್.ಕೆ.ಬಸಪ್ಪ, ಬೇತೂರು ರಾಜಣ್ಣ, ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಸೋಮಶೇಖರಪ್ಪ, ಶೇಖರಪ್ಪ, ಸಿದ್ದೇಶ್, ಜಗದೀಶಪ್ಪ ಬಣಕಾರ್, ಎಚ್.ಸಿದ್ದೇಶ್, ನಾಗರಾಜ್, ಶರಣಪ್ಪ, ಮಲ್ಲಿಕಾರ್ಜುನ್, ರಂಗನಾಥ್, ಆವರಗೆರೆ ರುದ್ರಮುನಿ, ಆರ್.ವೀರಬಸಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net