ಸಹಕಾರ ಸಂಘಗಳಲ್ಲಿ ರಾಜಕೀಯ ತರಬಾರದು ; ಡಾ.ಸೂರಜ್ ರೇವಣ್ಣ

ಸಹಕಾರ ಸಂಘಗಳಲ್ಲಿ ರಾಜಕೀಯ ತರಬಾರದು ; ಡಾ.ಸೂರಜ್ ರೇವಣ್ಣ
Published on

ಬೇಲೂರು: ರೈತರ ಅಭಿವೃದ್ಧಿಗೆ ಸೀಮೀತವಾಗಿರುವ ಸಹಕಾರ ಸಂಘಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ತರಬಾರದು. ಇದರಿಂದ ಸಹಕಾರ ಸಂಘಗಳ ಅಭಿವೃದ್ಧಿಗೆ ದುಷ್ಪರಿಣಾಮ ಬೀರುತ್ತದೆ ಎಂದು ವಿಧಾನಪರಿ?ತ್ ಸದಸ್ಯ ಡಾ.ಸೂರಜ್ ರೇವಣ್ಣ ಹೇಳಿದರು.


ಬೇಲೂರು ತಾಲೂಕಿನ ಹನಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಸಹಕಾರ ಸಂಘ ಮತ್ತು ಹಾಲಿನ ಡೇರಿಗಳು ರಾಜ್ಯದಲ್ಲಿಯೇ ಅತ್ಯುತ್ತಮ ಹೆಸರಿನೊಂದಿಗೆ ಉತ್ತಮ ಬೆಳೆವಣಿಗಲು ಮಾಶಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣರ ಶ್ರಮ ಕಾರಣ. ತಾಲೂಕಿನ 30 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ 26 ಸಂಘಗಳಿಗೆ ಮಾತ್ರ ಸ್ವಂತ ಕಟ್ಟಡವಿದೆ. ಉಳಿದಿರುವು ಸಂಘಗಳಿಗೂ ಮುಂದಿನ ದಿನಗಳಲ್ಲಿ ವ್ಯವಸ್ಥೆ ಕಲ್ಪಪಿಸಲು ಮುಂದಾಗಲಿದ್ದೇವೆ. ಹಾಗೂ ಮಲೆನಾಡು ಭಾಗದಲ್ಲಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ನಡೆದಿದ್ದರೂ ವಿಪಕ್ಷಗಳ ಪ್ರಮುಖರು ಶಾಸಕರ ಮತ್ತು ಪಕ್ಷದ ವಿರುದ್ಧ ಕೆಲ ಸಂಘಟನೆಯನ್ನು ಎತ್ತಿಕಟ್ಟಿ ಬಾಳೆಗಿಡ ನೆಟ್ಟು ಪ್ರತಿಭಟಿಸಿದ್ದಾರೆ. ಆದರೆ ಬೇಲೂರು ಕ್ಷೇತ್ರದ ಶಾಸಕರಾದ ಕೆ.ಎಸ್.ಲಿಂಗೇಶ್‌ರವರು ಕ್ಷೇತ್ರಕ್ಕೆ ಉತ್ತಮ ಕೆಲಸ ಮಾಡಿದ್ದಾರೆ ಮತ್ತು ಮಾಡಿಸುತಿದ್ದಾರೆ. ಇದಕ್ಕೆ ಸಾರ್ವಜನಿಕರು ತಲೆ ಕೆಡಿಸಿ ಕೊಳ್ಳಬಾರದು. 2023 ಕ್ಕೆ ನಮ್ಮದೆ ಸರ್ಕಾರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದರು.


ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಹನಿಕೆ ಗ್ರಾಮ ಪಂಚಾಯತಿ ಭಾಗದ ರೈತರು ಕರಗಡ ಸೊಸೈಟಿಯಲ್ಲಿ ಸಾಲ ಸೇರಿದಂತೆ ವಹಿವಾಟು ನಡೆಸುತಿದ್ದಾರೆ. ಆದರೆ ಈಗ ಹನಿಕೆಯಲ್ಲೆ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪನೆಯಿಂದ ಇಲ್ಲಿನ ಅಕ್ಕಪಕ್ಕದ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಅಲ್ಲದೆ ಸಾರ್ವಜನಿಕರು ಹಾಗೂ ರೈತರಿಂದಲೇ ಸ್ಥಾಪಿತವಾದ ಸಹಕಾರ ಸಂಸ್ಥೆ, ಸಂಘಗಳನ್ನು ಸರ್ಕಾರ ಖಾಸಗೀಕರಣ ಗೊಳಿಸಲು ಮುಂದಾಗಿರುವುದು ಸರಿಯಲ್ಲ, ಒಬ್ಬ ವ್ಯಕ್ತಿ ಮಲೆನಾಡು ಭಾಗದ ರಸ್ತೆಗೆ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿ ಒಂದು ಪಕ್ಷದ ಏಜೆಂಟ್ ರೀತಿ ವರ್ತಿಸುತ್ತಾ ಏಕ ವಚನದ ಪದ ಪ್ರಯೋಗ ಮಾಡುತಿದ್ದಾರೆ. ಆತ ಅದನ್ನು ತಿದ್ದಿಕೊಳ್ಳಬೇಕು. ಆತನಿಗೆ ವೇದಿಕೆ ಮೂಲಕವೇ ಎಚ್ಚರಿಸುತಿದ್ದೇವೆ ಎಂದರು.


ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ರೈತ ಪರವಾದ ಚಿಂತನೆ ಹಾಗೂ ಅಭಿವೃದ್ಧಿಗೆ ಒತ್ತು ನೀಡುವಲ್ಲಿ ಹೆಚ್.ಡಿ.ರೇವಣ್ಣನವರ ಪಾತ್ರ ಹಿರಿದು, ತಾಲೂಕಿನ 30 ಸೊಸೈಟಿಗಳಿಗೆ ಈಗಾಗಲೇ 122 ಕೋಟಿ ಸಾಲ ನೀಡಿದೆ. ಒಟ್ಟು ರೂ 48 ಕೋಟಿ ಸಾಲಮನ್ನಾ ಮಾಡಲಾಗಿದೆ. ಸಹಕಾರ ಸಂಘದ ಬಲವರ್ಧನೆ ಜೆಡಿಎಸ್ ಪಕ್ಷದಿಂದ ಮಾತ್ರ ಸಾದ್ಯ, ಈ ನಿಟ್ಟಿನಲ್ಲಿ ಹನಿಕೆ ಸಹಕಾರ ಸಂಘಕ್ಕೆ ಪ್ರಥಮ ಹಂತದಲ್ಲೆ 10 ಲಕ್ಷ ರೂ, ಸಾಲ ನೀಡಲಾಗುತ್ತಿದೆ ಎಂದರು.


ಹೆಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ನಾಗರಾಜ್, ನಿರ್ದೇಶಕ ರಾಮಚಂದ್ರೇಗೌಡ, ಹನಿಕೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಈರೇಗೌಡ, ಉಪಾಧ್ಯಕ್ಷ ಚಂದ್ರಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷೆ ಲಕ್ಷ್ನಿರಾಜೀವ್, ಸಹಕಾರ ಸಂಘಗಳ ಉಪ ನಿಬಂಧಕ ಶಂಕರ್, ಸಕಲೇಶಪುರ ಉಪ ವಿಭಾದ ಸಹಾಯಕ ನಿಬಂಧಕ ಖಾಲಿದ್ ಅಹಮ್ಮದ್, ಜೆಡಿಎಸ್ ಮುಖಂಡರಾದ ಸಿ.ಹೆಚ್.ಮಹೇಶ್, ಭುವನೇಶ್, ದೊಡ್ಡವೀರೇಗೌಡ, ಮೇಲ್ವಿಚಾರಕ ದಿನೇಶ್, ಕಾರ್ಯದರ್ಶಿ ಹೆಚ್.ಪಿ.ಕುಮಾರ, ನಿರ್ದೇಶಕರಾದ ಶಾಂತವೀರಪ್ಪ, ಜಗದೀಶ್, ಗುರುಮೂರ್ತಿ, ಕುಮಾರ್, ಪ್ರಸನ್ನಕುಮಾರ್, ಗಿರೀಶ್, ಯಶೋಧ, ಗಂಗಮ್ಮ, ಗೀತಾ, ಸಂಘದ ಇಒ ಜಗದೀಶ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net