ಸಹಕಾರ ಸಂಘಗಳ ಕೊಡುಗೆ ಅಪಾರ

01raju3(Sahakara dinacharane)
Published on

ಚಾಮರಾಜನಗರ: ದೇಶದ ಅಭಿವೃದ್ಧಿಗೆ ಸಹಕಾರ ಸಂಘಗಳ ಕೊಡುಗೆ ಅಪಾರ ಎಂದು ನವ್ಯ ಕರ್ನಾಟಕ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಎಂ.ನಂಜುಂಡಸ್ವಾಮಿ ತಿಳಿಸಿದರು.

ನಗರದ ರಥದ ಬೀದಿಯಲ್ಲಿರುವ ನವ್ಯ ಕರ್ನಾಟಕ ಸೌಹಾರ್ದ ಸಹಕಾರ ಸಂಘ ನಿಯಮಿತ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಸಹಕಾರ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಹಕಾರ ಸಂಘಗಳು ಬಡವರ ಆಶಾಕಿರಣವಾಗಿವೆ. ಸೇವೆಯನ್ನು ಹೆಚ್ಚು ಮಟ್ಟದಲ್ಲಿ ಜನಗಳಿಗೆ ತಲುಪಿಸುವ ಪ್ರಯತ್ನ ನಮ್ಮದು. ಇದೇ ವೇಳೆ ನವ್ಯ ಕರ್ನಾಟಕ ಸೌಹಾರ್ದ ಸಹಕಾರ ಸಂಘ ನಿಯಮಿತದಿಂದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಿರ್ದೇಶಕರಾದ ಎಂ.ಮಹೇಶ್, ಡಿ.ಪಿ.ಪ್ರಕಾಶ್, ಅರುಣ, ಕರುಣಾಕರ, ರತ್ನಮ್ಮ, ಪ್ರಭುಸ್ವಾಮಿ ಬಸವಣ್ಣ, ಶಿವಕುಮಾರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net