ಸಹಕಾರ ಸಂಘಗಳ ಅಭಿವೃದ್ಧಿಗೆ ಕೈಜೋಡಿಸಿ

nela Gudali Pooje
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪಕ್ಷಾತೀತವಾಗಿ ಹಾಗೂ ಜಾತ್ಯತೀತವಾಗಿ ಪ್ರತಿಯೊಬ್ಬರು ಕೈಜೋಡಿಸಿದಾಗ ಸಹಕಾರ ಸಂಘಗಳು ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ನೂತನ ಕಚೇರಿ ಹಾಗೂ ಉಗ್ರಾಣ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರವು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಹಿರಿಯರು ಬಿತ್ತಿದ ಸಹಕಾರ ಜೀಜವು ಹೆಮ್ಮರವಾಗಿ ಬೆಳೆದಿವೆ. ದುರ್ಬಲ ವರ್ಗದವರು, ರೈತರು, ಕಾರ್ಮಿಕರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಶಕ್ತಿ ತುಂಬುತ್ತಿದೆ. ಸಹಕಾರ ಕ್ಷೇತ್ರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೆ ಎಲ್ಲರೂ ಸಮಾನರು ಎಂಬ ಭಾವನೆಯಿಂದ ಕಾಣಬೇಕಿದೆ. ಜತೆಗೆ ರೈತರ ಕೃಷಿ-ಕಾರ್ಯಗಳಿಗೆ ಅವಶ್ಯವಿರುವ ಬಿತ್ತನೆ ಬೀಜ, ಗೊಬ್ಬರ ಸೇರಿ ಜನತೆಗೆ ಪಡಿತರ ಸೌಲಭ್ಯ ಒದಗಿಸುತ್ತಿರುವ ಟಿಎಪಿಸಿಎಂಎಸ್ ಕಾರ್ಯ ಮಾದರಿ ಎನಿಸಿದೆ ಎಂದರು.
ಸಂಘದ ಅಧ್ಯಕ್ಷ ಬಿ.ಎನ್.ನರಸಿಂಹಮೂರ್ತಿ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರು, ಸದಸ್ಯರು ಸೇರಿ ಪ್ರತಿಯೊಬ್ಬರ ಸಹಕಾರ ಪಡೆದು ಸುಮಾರು 1.75ಕೋಟಿ ರೂ. ವೆಚ್ಚದಲ್ಲಿ ಟಿಎಪಿಎಂಎಸ್ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಕೇಶವ್‌ಮೂರ್ತಿ, ನಗರಸಭೆ ಅಧ್ಯಕ್ಷೆ ಎನ್.ಎಸ್.ಪೂರ್ಣಿಮಾ ಸುಗ್ಗರಾಜು, ಉಪಾಧ್ಯಕ್ಷೆ ಸುಜಾತಾ ಮುನಿಯಪ್ಪ, ಸದಸ್ಯ ಸಿ.ಪ್ರದೀಪ್, ಲೋಲಾಕ್ಷಿಗಂಗಾಧರ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್‌ಗೌಡ, ಸದಸ್ಯ ಬಿ.ಜಿ.ವಾಸು, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘದ ಉಪಾಧ್ಯಕ್ಷ ವೀರಮಾರೇಗೌಡ, ನಿರ್ದೇಶಕ ಎ.ಪಿಳ್ಳಪ್ಪ, ಕೆ.ಆರ್.ಗುರುಪ್ರಕಾಶ್, ಪಟ್ಟಭಿರಾಮಯ್ಯ, ಬಿ.ಎಚ್.ಶಿವರಾಮಯ್ಯ, ಜಗಜ್ಯೋತಿಬಸವೇಶ್ವರ, ಜಿ.ಸಂಪತ್, ನಾಗಭೂಷನ್, ಟಿ.ಎಸ್.ಮೋಹನ್‌ಕುಮಾರ್, ಸಿರಾಜ್‌ಆಹಮ್ಮದ್, ಮಂಜುಳಾ, ಕಾರ್ಯದರ್ಶಿ ರಮೇಶ್, ಮುಖಂಡ ಎಂ.ಕೆ.ನಾಗರಾಜು, ಮಂಜುನಾಥ್‌ಗೌಡ, ಟಿ.ನಾಗರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net