

ನೆಲಮಂಗಲ: ಸರ್ವಸದಸ್ಯರ ಬಲದಿಂದ ಸಹಕಾರ ಸಂಘ ಸದೃಢವಾಗಿದೆ ಎಂದು ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎನ್. ಲಕ್ಷ್ಮೀನಾರಾಯನ್ ತಿಳಿಸಿದರು.
ತಾಲೂಕಿನ ಮಲ್ಲರಬಾಣವಾಡಿ ಗ್ರಾಮದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಸಬಾ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಶುಕ್ರವಾರ ಆಯೋಜಿಸಿದ್ದ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.
ಗ್ರಾಮಾಂತರ ಜಿಲ್ಲೆಯಲ್ಲಿ ಕಸಬಾ ಸಹಕಾರ ಸಂಘ ಉತ್ತಮ ಸ್ಥಾನ ದೊರೆತಿದೆ. ಸಂಘದ ಎಲ್ಲ ಸದಸ್ಯರಿಗೂ ಇದರ ಶ್ರೇಯ ಸಲ್ಲುತ್ತದೆ. ಸಂಘವನ್ನು ಕುಟುಂಬವೆಂದು ಭಾವಿಸಿರುವ ಎಲ್ಲ ನಿರ್ದೇಶಕರು ಮತ್ತು ಸಿಬ್ಬಂದಿ ಸಂಘದ ಏಳಿಗೆಗೆ ಶ್ರಮಿಸುತ್ತಿದ್ದಾರೆ ಎಂದರು.
ಸರ್ವ ಸದಸ್ಯರು ಸಂಘದೊಂದಿಗೆ ಸಕ್ರಿಯವಾಗಿ ವ್ಯವಹರಿಸಿ ವೈಯಕ್ತಿಕ ಹಾಗೂ ಸಂಘದ ಬೆಳವಣಿಗೆಗೆ ಕಾರಣವಾಗಬೇಕು. ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಅನುಕೂಲ ಕಲ್ಪಿಸಲು ಸೀಶಕ್ತಿ ಸಂಘದ ಮಹಿಳೆಯರಿಗೆ ಬಡ್ಡಿರಹಿತ ಸಾಲ ನೀಡಲಾಗುವುದು ಎಂದು ಹೇಳಿದರು.
ಸಂಘಕ್ಕೆ ಬಂದಿರುವ ಲಾಭದಲ್ಲಿ ನಿಗದಿತ ಪ್ರಮಾಣದ ಮೊತ್ತವನ್ನು ಮೃತಪಟ್ಟ ಸಂಘದ ಸದಸ್ಯರ ಅಂತ್ಯಸಂಸ್ಕಾರಕ್ಕೆ ಮೀಸಲಿಡಬೇಕು. ಅಪಘಾತ ವಿಮೆ ಸೇರಿ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಂ.ವಿ.ರುದ್ರೇಶ್ ಮನವಿ ಮಾಡಿದರು.
ಇತ್ತೀಚೆಗೆ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಮೂರು ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ 13 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ನಿರ್ದೇಶಕರಾದ ಬಿ. ರಾಮಕೃಷ್ಣಯ್ಯ, ಬಿ. ರಂಗನಾಥ್, ಡಿ.ಟಿ. ಧನಲಕ್ಷ್ಮೀ, ಎ.ಎಸ್. ಸರಳಾ, ಗೀತಾ, ಸಿ. ನಟರಾಜು, ಹೇಮಂತ್‌ಕುಮಾರ್, ಎಂ. ರೇಣುಕೇಶ್, ಕಾರ್ಯನಿರ್ವಾಹಕ ಕೆ. ಮಹೇಶ್‌ಕುಮಾರ್, ಸಿಬ್ಬಂದಿ ಎಂ.ಪಿ. ನಾಗರಾಜು, ಎಚ್. ಸಂಪತ್, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ನರಸಿಂಹಮೂರ್ತಿ, ಸಂಘದ ಮಾಜಿ ಕಾರ್ಯನಿರ್ವಾಹಕ ರತ್ನಪ್ರಕಾಶ್ ಮತ್ತಿತರರು ಇದ್ದರು.