ಸಹಕಾರ ಸಂಘಕ್ಕೆ ಪಾಟೀಲ್ ಸಾರಥ್ಯ

election
Published on

ಬೀದರ್: ಸರ್ಕಾರಿ, ಅರೆ ಸರ್ಕಾರಿ ನೌಕರರ ಮತ್ತು ಇತರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಕುಮಾರ ಬಿ. ಪಾಟೀಲ್ ಹಾಗೂ ಉಪಾಧ್ಯಕ್ಷರಾಗಿ ಅನೀಲಕುಮಾರ ಗುಂಡೇರಾವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಸಂಘದ ಕಾರ್ಯಾಲಯದಲ್ಲಿ ಗುರುವಾರ ಚುನಾವಣೆ ಜರುಗಿತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಕೃಷ್ಣಮೂರ್ತಿ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು.

ನಿರ್ದೇಶಕರಾದ ರಾಜಕುಮಾರ ಮಾಳಗೆ, ಅಖಿಲ್ ಅಹ್ಮದ್ ಖುರೇಷಿ, ರಮೇಶ ಮಠಪತಿ, ಸಂಗಮ್ಮ ಗಣಾಚಾರಿ, ನೀಲಕಂಠ ಬಿರಾದಾರ, ರಾಜೇಂದ್ರಕುಮಾರ ಗಂದಗೆ, ಬಸವರಾಜ ಜಕ್ಕಾ, ಕವಿತಾ ಪಾಟೀಲ್ ಇದ್ದರು. ನಂತರ ನಡೆದ ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಹಕಾರ ಇಲಾಖೆ ಆಡಳಿತಧಿಕಾರಿ ಸಂಗಮೇಶ ಅಧಿಕಾರ ಹಸ್ತಾಂತರಿಸಿದರು. ಕಾರ್ಯನಿರ್ವಾಹಕ ಅಧಿಕಾರಿ ಸಿ.ಎಸ್.ಗಣಾಚಾರಿ ಇತರರಿದ್ದರು. ಕಳೆದ ತಿಂಗಳು ಸಂಘದ 10 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net