ಸಹಕಾರ ಸಂಘಕ್ಕೆ ಅವಿರೋಧ ಆಯ್ಕೆ

oplus_34
oplus_34
Published on

ಚಿತ್ರದುರ್ಗ: ತಾಲೂಕಿನ ದೊಡ್ಡಕಿಟ್ಟದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಡಿ.ಕೆ.ಹಳ್ಳಿಯ ಎಚ್.ರುದ್ರಪ್ಪ, ಉಪಾಧ್ಯಕ್ಷರಾಗಿ ಎಸ್.ಕೆ.ಹಳ್ಳಿಯ ಸುಮಿತ್ರಾ ಮಹೇಶ್ ಅವಿರೋಧ ಆಯ್ಕೆಯಾದರು.

ಇದೇ ವೇಳೆ ನಿರ್ದೇಶಕರಾಗಿ ಎಂ.ಈಶ್ವರಪ್ಪ, ಅಂಜಿನಮೂರ್ತಿ, ಓಬಪ್ಪ, ಎಚ್.ಚಂದ್ರಪ್ಪ, ಟಿ.ಈರಪ್ಪ, ಹರೀಶ್, ತಿಪ್ಪೇಸ್ವಾಮಿ ನಾಕೀಕೆರೆ, ಸುಮಿತ್ರಾ ಗೋಪಿ, ಜೆ.ಈ.ಈರಪ್ಪ, ಕರಿಯಪ್ಪ ಆಯ್ಕೆಯಾಗಿದ್ದಾರೆ. ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಸುಮಿತ್ರಾ, ಶಿಕ್ಷಕ ಮಧು, ಸೊಸೈಟಿ ಸಿಇಒ ರಂಗಸ್ವಾಮಿ, ಸಿಬ್ಬಂದಿ ಮಧು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net