

ನಾಪೋಕ್ಲು: ನಾಪೋಕ್ಲು ನಾಡು ಕೊಡವ ಸೌಹಾರ್ದ ಪತ್ತಿನ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 5,70,628 ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಅಪ್ಪಾರಂಡ ಎಸ್.ಸುಧೀರ್ ಅಯ್ಯಪ್ಪ ಹೇಳಿದರು.
ಇಲ್ಲಿನ ಕೊಡವ ಸಮಾಜದ ಅಪ್ಪಚ್ಚ ಕವಿ ಸಭಾಂಗಣದಲ್ಲಿ 2021-22ರ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಸಂಘವು 71 ಸದಸ್ಯರನ್ನು ಹೊಂದಿದ್ದು, ಉತ್ತಮ ಸೇವೆ ನೀಡುತ್ತಿದೆ ಎಂದರು.
ಸಂಘದ ಗೌರವ ಅಧ್ಯಕ್ಷ ಅಪ್ಪಚೆಟ್ಟೊಳಂದ ಮನು ಮುತ್ತಪ್ಪ, ಉಪಾಧ್ಯಕ್ಷ ಮಂಡೀರ ರಾಜಪ್ಪ ಚಂಗಪ್ಪ , ನಿರ್ದೇಶಕರಾದ ಮಾಳೆಯಂಡ ಎ.ಅಯ್ಯಪ್ಪ , ಬೋಳ್ಳಿಯಂಡ ಪಿ.ಹರೀಶ್ ಕಾರ್ಯಪ್ಪ, ಮುಕ್ಕಟಿರ ಎಂ.ವಿನಯ್, ಕನ್ನಂಭೀರ ಸುಧೀ ತಿಮ್ಮಯ್ಯ , ಕಾಟು ಮಣಿಯಂದ ಉಮೇಶ್, ಚೋಕಿರ ಸಜಿತ್ ಚಿನ್ನಪ್ಪ, ಚೇನಂಡ ಗಿರೀಶ್, ಬಿದ್ದಾಟಂಡ ರಮೇಶ್ ಚೆಂಗಪ್ಪ , ಕುಂಡಿಯೊಳಂದ ಸಿ.ಪುವಯ್ಯ, ಮೂವೇರ ರೇಖಾ ಪ್ರಕಾಶ್, ಕೋಟೆರ ನೈಲಾ ಸುರೇಶ್, ಕುಲ್ಲೇಟಿರ ಅಜಿತ್ ನಾಣಯ್ಯ, ಮುಖ್ಯ ಕಾರ್ಯನಿರ್ವಾಹಕ ಎಸ್.ಪಿ.ದೇವಯ್ಯ, ಕೆ.ಜಿ.ಸರಸ್ವತಿ ಉಪಸ್ಥಿತರಿದ್ದರು.