ಸಹಕಾರ ಶಿಕ್ಷಣ ನಿಧಿ ವಸೂಲಾತಿಗೆ ಸೂಚನೆ

12Ravig7
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಕಾರ್ಯದರ್ಶಿ ಲಕ್ಷ್ಮೀಪತಯ್ಯ ಅವರನ್ನು ಸನ್ಮಾನಿಸಲಾಯಿತು. ಜಗದೀಶ ಕವಟಗಿಮಠ, ಪ್ರಾಚಾರ್ಯ ಎನ್.ಎಂ.ಶಿವಕುಮಾರ, ಕೆ.ಮಲ್ಲಯ್ಯ, ಎಸ್.ಎನ್. ವೇಣುಗೋಪಾಲ ಇತರರು ಇದ್ದರು.
Published on

ಬೆಳಗಾವಿ: ಬೆಳಗಾವಿ ವಿಭಾಗದ ಜಿಲ್ಲಾ ಸಹಕಾರ ಯೂನಿಯನ್‌ಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಸಹಕಾರ ಶಿಕ್ಷಕ ಹಾಗೂ ಮಹಿಳಾ ಶಿಕ್ಷಕಿಯರು ಮತ್ತು ಬೆಳಗಾವಿ ವಿಭಾಗದ ಕೆಐಸಿಎಂನ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಪ್ರಗತಿ ಪರಿಶೀಲನಾ ಸಭೆ ಬೆಳಗಾವಿಯ ಕೆಐಸಿಎಂ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.

ರಾಜ್ಯ ಸಹಕಾರ ಮಹಾಮಂಡಳಿ ಕಾರ್ಯದರ್ಶಿ ಲಕ್ಷ್ಮೀಪತಯ್ಯ ಮಾತನಾಡಿ, ಆಯಾ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಸಹಕಾರ ಶಿಕ್ಷಣ ನಿಧಿಯನ್ನು ವಸೂಲಾತಿ ಮಾಡಲು ಸೂಚಿಸಿದರು. ಜಿಲ್ಲಾ ಸಹಕಾರ ಯೂನಿಯನ್‌ಗಳಿಗೆ ಸದಸ್ಯತ್ವ ಹೆಚ್ಚಿಸಲು ಮತ್ತು ಸಹಕಾರ ವಾರ ಪತ್ರಿಕೆ ಚಂದಾದಾರರಾಗಿ ಮಾಡಲು ಗುರಿ ನೀಡಿದರು. ಕ್ಲಸ್ಟರ್ ತರಗತಿಗಳನ್ನು ನಿಗದಿತ ಸಮಯದಲ್ಲಿ ಗುರಿ ತಲುಪಲು ಜಿಲ್ಲಾ ಸಹಕಾರ ಶಿಕ್ಷಕರು, ಶಿಕ್ಷಕಿಯರಿಗೆ ಸೂಚಿಸಿದರು. ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಉಪಾಧ್ಯಕ್ಷ ಜಗದೀಶ ಕವಟಗಿಮಠ, ಸಹಕಾರ ಶಿಕ್ಷಣಾಧಿಕಾರಿ ಕೆ.ಮಲ್ಲಯ್ಯ, ಆಂತರಿಕ ಲೆಕ್ಕಪರಿಶೋಧಕ ಎಸ್.ಎನ್.ವೇಣುಗೋಪಾಲ, ಪ್ರಾಚಾರ್ಯ ಎನ್.ಎಂ.
ಶಿವಕುಮಾರ, ಆರ್.ಟಿ.ಚೌಗಲೆ, ಚಂದ್ರಶೇಖರ್ ಕರಿಯಪ್ಪನವರ, ವಸಂತಗೀತಾ ಹಿರೇಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net