

ಚಾಮರಾಜನಗರ: ಸಹಕಾರ ಕ್ಷೇತ್ರದಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ವರ್ತಕರ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಎಸ್.ಬಾಲಸುಬ್ರಮಣ್ಯ ಹೇಳಿದರು.
ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ವರ್ತಕರ ಸೌಹಾರ್ದ ಸಹಕಾರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಧ್ವಜಾರೋಹಣ ಸಮಾರಂಭದಲ್ಲಿ ಮಾತನಾಡಿ, ಈ ದೇಶದ ಆರ್ಥಿಕತೆಯಲ್ಲಿ ಸರ್ಕಾರಿ ಕ್ಷೇತ್ರವು ಪ್ರಮುಖ ಪಾತ್ರ ವಹಿಸಿದ್ದು, ಆರ್ಥಿಕವಾಗಿ ಹಿಂದುಳಿದ ಎಲ್ಲರಿಗೂ ಅಭಿವೃದ್ಧಿ ಹೊಂದಲು ನಮ್ಮ ಸಹಕಾರ ಕ್ಷೇತ್ರ ಪ್ರಮುಖವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸಿ.ಪಿ ಪದ್ಮಪ್ರಸಾದ್ ಧ್ವಜಾರೋಹಣ ನೆರವೇರಿಸಿದರು. ನಿರ್ದೇಶಕರಾದ ಎಸ್.ಬಾಲಸುಬ್ರಮಣ್ಯ, ಕೆ.ಎಸ್.ಚಿದಾನಂದ ಗಣೇಶ, ಸಿ.ಎಸ್.ಮಹೇಶಕುಮಾರ್, ಎಚ್.ಬಿ.ರಾಜಶೇಖರ್, ಬಿ.ಶ್ರೀಧರ್, ಎ.ಶ್ರೀನಿವಾಸನ್, ಎಸ್.ವಿ.ಗಣೇಶ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ. ಸಂಕೀರ್ತನ್, ಸಿ.ಬಿ.ಪ್ರಭುಸ್ವಾಮಿ ಉಪಸ್ಥಿತರಿದ್ದರು.