ಸಹಕಾರ ಕ್ಷೇತ್ರದ ಪ್ರಯೋಜನ ಪಡೆದುಕೊಳ್ಳಿ

Sapthaha
Published on

ಚಿತ್ರದುರ್ಗ: ಬರದಿಂದಾಗಿ ಸಂಕಷ್ಟದಲ್ಲಿರುವ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದಿಂದ ಸಿಗುವ ಪ್ರಯೋಜನ ಸಹಕಾರಿಗಳು ಪಡೆದುಕೊಳ್ಳಿ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿರ್ದೇಶಕ ಎಸ್.ಆರ್.ಗಿರೀಶ್ ಸಲಹೆ ನೀಡಿದರು.

ಸಹಕಾರ ಭವನದಲ್ಲಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ತಾಲೂಕು ವ್ಯಾಪ್ತಿಯ ಸಂಘಗಳು ಮತ್ತು ಬ್ಯಾಂಕ್‌ಗಳಿಂದ ಮಂಗಳವಾರ ನಡೆದ ಅಖಿಲ ಭಾರತ ಸಹಕಾರ ಸಪ್ತಾಯ ಉದ್ಘಾಟಿಸಿ ಮಾತನಾಡಿದರು.

ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆ ಅಂಗವಾಗಿ ನ. 20ರವರೆಗೂ ವಿಶೇಷವಾಗಿ ಸಪ್ತಾಹ ಆಚರಿಸಲಾಗುವುದು. ಕಾನೂನಿನ ತಿದ್ದುಪಡಿಗಳ ಹಾಗೂ ಕೇಂದ್ರ ಸರ್ಕಾರ ಕ್ಷೇತ್ರಕ್ಕೆ ಸಚಿವಾಲಯ ಆರಂಭಿಸಿದ್ದು, ಬೆಳವಣಿಗೆಗಳ ಕುರಿತು ಚರ್ಚಿಸಲಾಗುವುದು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿಂಕಲು ಬಸವರಾಜ್ ಮಾತನಾಡಿ, ರೈತರು ಸಹಕಾರ ಇಲಾಖೆ, ಬ್ಯಾಂಕ್‌ಗಳಲ್ಲಿ ಸಿಗುವ ಸೌಲಭ್ಯ ಪಡೆದುಕೊಳ್ಳಬೇಕು. ಆಡಳಿತ ಮಂಡಳಿಯಲ್ಲಿ ಕಾನೂನು ಕುರಿತು ಮಾಹಿತಿ ಪಡೆಯಬೇಕು. ಆಗ ಮಾತ್ರ ಸಂಘಗಳನ್ನು ಅಭಿವೃದ್ಧಿ ಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಚಿತ್ರದುರ್ಗ ಟಿಎಪಿಸಿಎಂಎಸ್ ಅಧ್ಯಕ್ಷ ಎಚ್.ಎಂ.ಮಂಜುನಾಥಪ್ಪ ಮಾತನಾಡಿ, ಕೇಂದ್ರದಲ್ಲಿ ಸಹಕಾರ ಕ್ಷೇತ್ರಕ್ಕೆ 900 ಕೋಟಿ ರೂ. ಬಜೆಟ್‌ನಲ್ಲಿ ಮೀಸಲಿಟ್ಟಿರುವುದು ಹೆಮ್ಮೆಯ ಸಂಗತಿ. ಉತ್ತರ ಕರ್ನಾಟಕದಲ್ಲಿ ಡಿಸಿಸಿ ಬ್ಯಾಂಕ್‌ವೊಂದು ಮಾಡುವ ಕೆಲಸ ಒಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಾಡುತ್ತಿದೆ. ಅದು ನಮ್ಮಲ್ಲೂ ಆಗಬೇಕು ಎಂದು ಸಲಹೆ ನೀಡಿದರು.

ಮಾತೃಶ್ರೀ ಎನ್.ಮಂಜುನಾಥ್ ಮಾತನಾಡಿ, ಈ ವರ್ಷ ಮಳೆ ಆಗದೆ ತೀವ್ರ ಬರ ಅನುಭವಿಸುತ್ತಿದ್ದು, ಕುಡಿಯುವ ನೀರಿನ ಬವಣೆ ಮತ್ತು ಜಾನುವಾರಗಳಿಗೆ ಮೇವಿನ ಕೊರತೆ ಉಂಟಾಗುವ ಸಾಧ್ಯತೆ ಇದ್ದು, ಅದನ್ನು ತಗ್ಗಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು ಎಂದರು.

ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜೆ.ಶಿವಪ್ರಕಾಶ್, ಎಚ್.ಎಂ.ದ್ಯಾಮಣ್ಣ, ನಿರ್ದೇಶಕರಾದ ಜಿ.ಈ.ಅಜ್ಜಪ್ಪ, ಟಿ.ಮಹಂತೇಶ್, ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ.ಕೃಷ್ಣಮೂರ್ತಿ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಎಚ್.ಹಿಮಂತ್‌ರಾಜ್, ಶಂಕರಮೂರ್ತಿ, ಹಾಲು ವಿಸ್ತರಣಾಧಿಕಾರಿ ವಿನೂತ್‌ಕುಮಾರ್, ಸಿಇಒ ನಾಗರಾಜ್ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net