ಸಹಕಾರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ

Published on

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಪ್ರಗತಿಗಾಗಿ ಹಾಗೂ ಎಂಡಿಸಿಸಿ ಬ್ಯಾಂಕ್ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

ಕೆ.ಎಂ.ದೊಡ್ಡಿ ಸಮೀಪದ ತೊರೆಬೊಮ್ಮಮಹಳ್ಳಿ ಗ್ರಾಮದಲ್ಲಿ ಮಂಡ್ಯ ಜಿಲ್ಲಾ ಸಹಕಾರಿ ಕೇಂದ್ರ (ಎಂಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೇಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಜತೆಗೂಡಿ ಸಹಕಾರಿಗಳ ಜತೆ ಏರ್ಪಡಿಸಿದ್ದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ಬೆಂಬಲಿತ ಸಹಕಾರಿಗಳು ಪಕ್ಷದ ನಿಷ್ಠೆಗೆ ಬದ್ಧವಾಗಿ ವಿರೋಧ ಪಕ್ಷಗಳ ಯಾವುದೇ ಆಮಿಷಗಳಿಗೆ ಒಳಗಾಗದೆ ಕಾಂಗ್ರೆಸ್ ಪಕ್ಷದಿಂದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವ ಮದ್ದೂರು ತಾಲೂಕಿನ ಮೂರು ಕ್ಷೇತ್ರಗಳಿಂದ ಮಂಡ್ಯ ಜಿಲ್ಲಾ ಕೈಗಾರಿಕಾ ಸಹಕಾರ ಇತರ ಸಹಕಾರ ಸಂಘಗಳ ಪರಿಷತ್ತಿನ ವತಿಯಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಕೆ.ಸಿ ಜೋಗಿಗೌಡ, ಮಂಡ್ಯ ವಿಭಾಗದ (ಮಂಡ್ಯ, ಮದ್ದೂರು, ಮಳವಳ್ಳಿ) ಹಾಲು ಉತ್ಪಾದಕರ ಸಹಕಾರ ಸಂಘಗಳ ವತಿಯಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಸಿ.ಚೆಲುವರಾಜು ಹಾಗೂ ಮದ್ದೂರು ತಾಲೂಕಿನ ವ್ಯವಸಾಯೋತ್ಪಾನ ಕೃಷಿ ಪತ್ತಿನ ಸಹಕಾರ ಸಂಘಗಳ ವತಿಯಿಂದ ಸ್ಪರ್ಧಿಸಿರುವ ಹಾಲಿ ನಿರ್ದೇಶಕ ಸಂದರ್ಶ ಅವರನ್ನು ಹೆಚ್ಚಿನ ಮತಗಳನ್ನು ನೀಡಿ ಅವರನ್ನು ಜಯಗಳಿಸಬೇಕಾಗಿ ಮನವಿ ಮಾಡಿದರು.

ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು ಮಾತನಾಡಿ, ಕಾಂಗ್ರೆಸ್ ಸರ್ಕಾರ ಆಡಳಿತ ಬಂದ ನಂತರ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಅತಿ ಹೆಚ್ಚು ಅನುದಾನವನ್ನು ನೀಡಿದ್ದಾರೆ. ಅಲ್ಲದೆ ಮಂಡ್ಯ ಎಂಡಿಸಿಸಿ ಬ್ಯಾಂಕ್ ಹಾಗೂ ಮನ್ ಮುಲ್‌ನ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಸುಧಾರಣೆ ಕಂಡು ಗ್ರಾಮೀಣ ಭಾಗದ ರೈತರ ಹಾಗೂ ಹಾಲು ಉತ್ಪಾದಕರ ಬೆಳವಣಿಗೆಗಾಗಿ ಹಲವು ಯೋಜನೆಗಳನ್ನು ರೂಪಿಸಿ ಹಲವಾರು ರೀತಿಯಲ್ಲಿ ಸಾಲಸೌಲಭ್ಯಗಳನ್ನು ನೀಡಿ ಆರ್ಥಿಕವಾಗಿ ಅವರನ್ನು ಸಬಲೀಕರಣ ಮಾಡಲು ಶ್ರಮಿಸಲಾಗುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಬಿ.ಬಸವರಾಜು, ಪುರಸಭಾ ಸದಸ್ಯ ಪ್ರಸನ್ನಕುಮಾರ್, ಭಾರತಿನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ತಾಲೂಕು ಭೂ ನ್ಯಾಯಮಂಡಳಿಯ ಸದಸ್ಯ ಮಹೇಂದ್ರ, ಕೆಡಿಪಿ ಸಮಿತಿಯ ಸದಸ್ಯ ಅಭಿಷೇಕಗೌಡ, ಮುಖಂಡರಾದ ಪುಟ್ಟರಾಮು, ಪೂಜಾರಿ ಮಹೇಶ್, ರಾಜೇಂದ್ರ, ದೇವರಹಳ್ಳಿ ದೊಡ್ಡಣ್ಣ, ಮೇಣಸಗೆರೆ ಪ್ರಕಾಶ್, ಮಡೇನಹಳ್ಳಿ ಪ್ರಸಾದ್, ಅಣ್ಣೂರು ವೀರೇಂದ್ರ, ಬಾಲು ಮತ್ತಿತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net