ಸಹಕಾರ ಕ್ಷೇತ್ರ ಸೇವೆ ತೃಪ್ತಿಕರ

Sanman - Copy
Published on

ಕಮಲನಗರ: ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರಿಗೆ ಕಮಲನಗರ ತಾಲೂಕಿನ ಸಂಗಮ್ ಗ್ರಾಮದಲ್ಲಿ ಗ್ರಾಮಸ್ಥರಿಂದ ಅದ್ದೂರಿ ಸನ್ಮಾನಿಸಲಾಯಿತು.

ಗ್ರಾಮದ ಮುಖ್ಯ ದ್ವಾರದಿಂದ ಶ್ರೀ ಸಂಗಮೇಶ್ವರ ದೇವಾಲಯವರೆಗೆ ಬಾಜಾ, ಭಜಂತ್ರಿಯೊಂದಿಗೆ ನಾಗಮಾರಪಳ್ಳಿ ಅವರನ್ನು ಮೆರವಣಿಗೆ ಮೂಲಕ ಸ್ವಾಗತಿಸಲಾಯಿತು. ನಂತರ ಶ್ರೀ ಸಂಗಮೇಶ್ವರ ದೇವರ ವಿಶೇಷ ಪೂಜೆ ನೆರವೇರಿತು. ಇಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಗಮಾರಪಳ್ಳಿ, ಶ್ರೀ ಸಂಗಮೇಶ್ವರರು ನಮ್ಮ ಮನೆ ದೇವರು. ಅವರ ಕೃಪೆಯಿಂದ ಸಹಕಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಕೆಲಸ ಮಾಡುತ್ತಿರುವ ತೃಪ್ತಿಯಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಪರಮೇಶ್ವರ ಮುಗಟೆ, ಡಿಸಿಸಿ ಬ್ಯಾಂಕ್ ಸಿಇಒ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕರಾದ ವಿಠ್ಠಲರೆಡ್ಡಿ ಯಡಮಲ್ಲೆ, ಚನ್ನಬಸಯ್ಯಾ ಸ್ವಾಮಿ, ಪ್ರಮುಖರಾದ ಝರೆಪ್ಪ ಮಮದಾಪುರೆ, ಭೀಮರಾವ ಪಾಟೀಲ್ ಡಿಗ್ಗಿ, ಮಾಧವರಾವ ಪಾಟೀಲ್ ಮದನೂರು, ಕಲ್ಯಾಣರಾವ ಪಾಟೀಲ್, ಶಾಂತಪ್ಪ ಬಿರಾದಾರ, ಜಯಪ್ರಕಾಶ ಬಿರಾದಾರ, ಶಶಿಕುಮಾರ ಪಾಟೀಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net