

ರಬಕವಿ/ಬನಹಟ್ಟಿ: ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಆರ್ಥಿಕ ಪ್ರಗತಿಗೆ ಬುನಾದಿಯಂತೆ ಕೆಲಸ ಮಾಡುತ್ತಿವೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವ್ಯವಹರಿಸುವ ಸಾಮರ್ಥ್ಯವಿಲ್ಲದ ಸಣ್ಣ ವರ್ತಕರು ಮತ್ತು ಬೀದಿ ವ್ಯಾಪಾರಿಗಳಿಗೂ ಸಹಕಾರಿಗಳು ಆರ್ಥಿಕ ನೆರವು ಕಲ್ಪಿಸಿ ವ್ಯವಹಾರಿಕ ಪೂರಕ ಚಟವಟಿಕೆಗೆ ಉತ್ತೇಜನ ನೀಡುತ್ತಿವೆ. ಸಹಕಾರಿಗಳಿಗೆ ಸಾಮುದಾಯಿಕ ಬದ್ಧತೆ ಇದೆ ಎಂಬುದಕ್ಕೆ ಇದೇ ಸ್ಪಷ್ಟ ನಿದರ್ಶನ ಎಂದು ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಶುಕ್ರವಾರ ಬೆಳಗ್ಗೆ ಜಿಲ್ಲೆಯ ಶ್ರೀ ಪ್ರಗತಿ ಪತ್ತಿನ ಸೌಹಾರ್ದ ಸಹಕಾರಿ ಸಂಘದ ರಬಕವಿಯಲ್ಲಿ 4ನೇ ಶಾಖಾ ಕಚೇರಿ ಪ್ರಾರಂಭೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.
ಸಹಕಾರಿ ಕ್ಷೇತ್ರದ ದಿಗ್ಗಜ ಎಂದೇ ಬಿಂಬಿತರಾಗಿರುವ ಪ್ರಕಾಶ ತಪಶೆಟ್ಟಿಯವರ ನೇತೃತ್ವದ ಸಹಕಾರಿಯು ರಬಕವಿ-ಬನಹಟ್ಟಿ ಸುತ್ತಲಿನ ನಾಗರಿಕರ ಆರ್ಥಿಕ ಸುಭೀಕ್ಷತೆಗೆ ಬುನಾದಿಯಾಗಲೆಂದು ಹಾರೈಸಿದರು.
ಶಾಸಕ ಸಿದ್ದು ಸವದಿ, ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ, ಸಹಕಾರಿಗಳಾದ ಶಂಕರ ಜುಂಜಪ್ಪನವರ, ಸುರೇಶ ಚಿಂಡಕ ಮಾತನಾಡಿ, ಸಹಕಾರಿ ಸಂಘಗಳ ಪ್ರಗತಿಗೆ ಗ್ರಾಹಕರು, ಸೌಜನ್ಯಯುತ ನಡೆಯ ಸಿಬ್ಬಂದಿ ಮತ್ತು ಆರ್ಥಿಕ ಶಿಸ್ತು ಹೊಂದಿರುವ ಆಡಳಿತ ಮಂಡಳಿ ಕಾರಣವಾಗುತ್ತದೆ. ಗ್ರಾಹಕರು ಸಹಕಾರಿ ಬೆಳವಣಿಗೆಗೆ ಪಡೆದ ಸಾಲದ ಸಕಾಲಿಕ ಮರುಪಾವತಿಗೆ ಮುಂದಾದಾಗ ಪ್ರಾದೇಶಿಕ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು.
ಹಿರಿಯ ವೈದ್ಯ ಡಾ. ಅಪ್ಪಾಸಾಹೇಬ ನಾಡಗೌಡಪಾಟೀಲ ಗಣಕ ಯಂತ್ರಗಳ ಉದ್ಘಾಟನೆ ನೆರವೇರಿಸಿದರು.
ಪ್ರಧಾನ ಕಚೇರಿ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಮಾತನಾಡಿ, ಸಂಸ್ಥೆಯಲ್ಲಿ ಬಂಗಾರ ಸಾಲ, ವಾಹನ ಸಾಲ, ವೇತನಾಧರಿತ ಸಾಲ, ಆಸ್ತಿಯಾಧರಿತ ಸಾಲ, ಓಡಿ, ಜಾಮೀನು ಸಾಲ ನೀಡಲಾಗುತ್ತದೆ. ಅವಧಿ ಠೇವುಗಳ ಬಡ್ಡಿದರದಲ್ಲಿಯೂ ಹೆಚ್ಚಳವಿದೆ. ಶಾಖೆಗಳು ಸಂಪೂರ್ಣ ಗಣಕೀಕೃತ ಹಾಗೂ ಕೋರ್ ಬ್ಯಾಂಕಿಂಗ್, ಸದಸ್ಯರ ಠೇವು ಬಡ್ಡಿ ಆಕರಣೆಯಲ್ಲಿ ಟಿಡಿಎಸ್ ವಿನಾಯತಿ, ನಾಮನಿರ್ದೇಶನ ಸೌಲಭ್ಯ, ತ್ವರಿತ ಮತ್ತು ವಿನಮೃ ಸೇವೆ ನೀಡಲಾಗುತ್ತದೆ. ಸಹಕಾರಿಗಳ ಬೆಳವಣಿಗೆಯಲ್ಲಿ ಸದಸ್ಯರು ಮತ್ತು ಗ್ರಾಹಕರು ನೆರವಾಗಬೇಕೆಂದು ಕೋರಿದರು.
ಶ್ರೀನಿಧಿ ಸಮೂಹ ಸಂಸ್ಥೆಯ ಮಲ್ಲಿಕಾರ್ಜುನ ನಾಶಿ, ತೇರದಾಳದ ಎಸ್‌ಡಿಎಂ ಮುಖ್ಯಸ್ಥ ಡಾ. ಮಹಾವೀರ ದಾನಿಗೊಂಡ, ಬಸವರಾಜ ತೆಗ್ಗಿ, ನೀಲಕಂಠ ಮುತ್ತೂರ, ಡಾ.ಜಿ.ಎಚ್. ಚಿತ್ತರಗಿ, ಧನಲಕ್ಷ್ಮೀ, ಚಿದಾನಂದ ಗಾಳಿ, ಶ್ರೀಶೈಲ ಕೌಜಲಗಿ, ಸಂಜಯ ತೇಲಿ, ಉದ್ಯಮಿ ಸೋಮಶೇಖರ ಕೊಟ್ರಶೆಟ್ಟಿ, ಶ್ರೀಶೈಲ ದಲಾಲ, ಬಸವರಾಜ ತೇಲಿ, ಗಜಾನನ ತೆಗ್ಗಿ, ಮಹಾದೇವ ದೂಪದಾಳ, ಪ್ರಭಾಕರ ಢಪಳಾಪುರ, ಶಂಕರ ಬಟಕುರ್ಕಿ, ಮಹಾಲಿಂಗ ಜುಂಜಪ್ಪನವರ, ದಯಾನಂದ ಬಾಗಲಕೋಟಮಠ, ಬಸವರಾಜ ಕುಂಚನೂರ, ಮಲ್ಲೇಶಪ್ಪ ಕುಚನೂರ, ಸುರೇಶ ಮುಳವಾಡ, ಸ್ಮೀತಾ ನಾಶಿ, ಸ್ಮೀತಾ ನಾಶಿ, ಶಿವಾನಂದ ಬಾಗಲಕೋಟಮಠ, ವಿದ್ಯಾಧರ ಗುಳ್ಳ, ಜಯವಂತ ಗುಳ್ಳ ಇತರರಿದ್ದರು.