ಸಹಕಾರ ಸಂಘಗಳ ಬಲವರ್ಧನೆಗೆ ಶ್ರಮಿಸಿ

16KMD-1
ಮುಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾದ ಹಿನ್ನಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಅಭಿನಂಧಿಸಿದರು.
Published on

ಕೆ.ಎಂ.ದೊಡ್ಡಿ: ಸಹಕಾರ ಸಂಘಗಳ ಬಲವರ್ಧನೆಗೆ ನಿರ್ದೆೇಶಕರು ಪಕ್ಷಭೇದ ಬಿಟ್ಟು ಕಾರ್ಯಯೋಜನೆ ರೂಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಮುಟ್ಟನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿನಂಧನೆ ಸ್ವೀಕರಿಸಿ ಮಾತನಾಡಿದ ಅವರು, ಸಹಕಾರ ಸಂಘಗಳು ರೈತರ ಜೀವನಾಡಿಗಳಾಗಿದ್ದು ಅವುಗಳನ್ನು ಉಳಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.

ಸಹಕಾರ ಸಂಘಗಳ ಅಭಿವೃದ್ಧಿಪಡಿಸಿದರೆ ರೈತರಿಗೆ ವರದಾನವಾಗಲಿದ್ದು ಸಂಘದ ನಿರ್ದೇಶಕರು ಒಗ್ಗಟಾಗಿ ಕಾರ್ಯ ನಿರ್ವಹಿಸದರೆ ರೈತರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಸಹಕಾರಿಯಾಗುತ್ತದೆ ಎಂದರು.
ನಿರ್ದೇಶಕರಾದ ಎಂ.ಈ. ಮಹೇಂದ್ರ, ಎಂ.ಎಚ್.ಪುಟ್ಟಸ್ವಾಮಿ, ಎಂ.ಎಸ್.ಪ್ರಜ್ವಲ್ ಸುರೇಶ್, ರಾಜಕುಮಾರ್, ಅಶೋಕ್, ಕಲನ್ಪಾ ಸುರೇಶ್, ಮಂಜುಳಾ ಉಮೇಶ್, ಚಿಕ್ಕನಾಥೇಗೌಡ, ಮುಖಂಡರಾದ ಮುಟ್ಟನಹಳ್ಳಿ ಶಿವಲಿಂಗೇಗೌಡ, ಭರತೇಶ್, ಎಂ.ಎಸ್.ಪುರೋಷತ್ತಮ, ಸಿದ್ದಯ್ಯ ಸೇರಿದಂತೆ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net