ಸಸ್ಯಸಂತೆ, ತೋಟಗಾರಿಕೆ ಅಭಿಯಾನ : ಉಕ್ಕುಂದ

KRISHNA UKKUND
Published on

ಕೊಪ್ಪಳ: ತೋಟಗಾರಿಕೆ ಇಲಾಖೆಯಿಂದ ಆ.15ರಿಂದ 20ವರೆಗೆ ನಗರದ ತೋಟಗಾರಿಕೆ ಆವರಣದಲ್ಲಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ ಹಮ್ಮಿಕೊಂಡಿದ್ದು, ರೈತರು, ಸಾರ್ವಜನಿಕರು ಭಾಗವಹಿಸುವಂತೆ ತೋಟಗಾರಿಕೆ ಉಪನಿರ್ದೇಶಕ ಕೃಷ್ಣಾ ಉಕ್ಕುಂದ ಮನವಿ ಮಾಡಿದ್ದಾರೆ.


ಇಲಾಖೆಯಿಂದ ಅನೇಕ ರೈತಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ತೋಟಗಾರಿಕೆ ಬೆಳೆ ಪ್ರದೇಶ ವಿಸ್ತರಣೆ ಹಾಗೂ ಸರ್ವತೋಮುಖ ಅಭಿವೃದ್ಧಿಗಾಗಿ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನ-2023 ಆಯೋಜಿಸಲಾಗಿದೆ. ಆ15ರಿಂದ 20ವರೆಗೆ ಜರುಗಲಿದೆ. ರೈತರಿಗೆ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಆಸಕ್ತಿ ಇರುವರರು ಒಂದೇ ಸೂರಿನಡಿ ತೋಟಗಾರಿಕೆ ಕ್ಷೇತ್ರಗಳಲ್ಲಿ ಉತ್ಪಾದಿಸಿದ ಮಾವು, ತೆಂಗು, ಪೇರಲ, ಚಿಕ್ಕು, ಅಂಜೂರ, ಕರಿಬೇವು, ನುಗ್ಗೆ, ದ್ರಾಕ್ಷಿ ತಳಿ ಜತೆಗೆ ಅನೇಕ ವಿಧದ ಕಸಿ ಸಸಿಗಳು, ಅಲಂಕಾರಿಕ ಸಸ್ಯಗಳು, ಹೂವಿನ, ತರಕಾರಿ, ಔಷಧೀಯ, ಸಾಂಬಾರು ಸಸ್ಯಗಳು, ನೇರಳೆ, ಸೀತಾಫಲ, ಬೀಜ ರಹಿತ ಸೀಬೆ, ಡ್ರ್ಯಾಗನ್ ಹಣ್ಣು, ಮೆಕಡೋನಿಯಾ, ಮಿಯಾ ಜಾಕಿ ಮಾವು ಮುಂತಾದ ಸಸ್ಯಗಳನ್ನು ಇಲಾಖೆಯ ಯೋಗ್ಯ ದರದಲ್ಲಿ ಮಾರಾಟ ಮಾಡಲಿದೆ.


ಇದರೊಂದಿಗೆ ಇಲಾಖೆ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ, ಎರೆಹುಳು ಗೊಬ್ಬರ, ಎರೆಜಲ ಹಾಗೂ ಜೈವಿಕ ಗೊಬ್ಬರ, ನೀಮಾಸ್ತ್ರ, ಜೀವಾಮೃತ, ಗೋಕೃಪಾಮೃತ ಮಾರಾಟ, ವಿವಿಧ ಬ್ಯಾಂಕುಗಳಿಂದ ರೈತರಿಗೆ ದೊರೆಯುವ ಸಾಲ ಸೌಲಭ್ಯಗಳ ಮಾಹಿತಿ, ಉಪ ಕಸುಬುಗಳ ಪರಿಚಯ ಮಾಡಿಕೊಡಲಾಗುವುದು. ಮಾಹಿತಿಗಾಗಿ ಮೊ.ಸಂ: 7406504120 ಸಂಖ್ಯೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net