ಸಸ್ತಾಪುರದಲ್ಲಿ ಶಿವಲಿಂಗೇಶ್ವರ ರಥೋತ್ಸವ ವೈಭವ

Oplus_131072
ಸಸ್ತಾಪುರ ಗ್ರಾಮದಲ್ಲಿ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರರ ೨೯ನೇ ಜಾತ್ರೋತ್ಸವ ನಿಮಿತ್ತ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಸಂಜೆ ಅದ್ದೂರಿ ರಥೋತ್ಸವ ನೆರವೇರಿತು.
Published on

ಬಸವಕಲ್ಯಾಣ: ಸಸ್ತಾಪುರ ಗ್ರಾಮದಲ್ಲಿ ಶ್ರೀ ಸಿದ್ದಲಿಂಗ ಯತಿರಾಜರ ಸ್ಮರಣೋತ್ಸವ ಹಾಗೂ ಶ್ರೀ ಸದ್ಗುರು ಶರಣ ಶಿವಲಿಂಗೇಶ್ವರರ ೨೯ನೇ ಜಾತ್ರೋತ್ಸವ ನಿಮಿತ್ತ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಸಂಜೆ ಅದ್ದೂರಿ ರಥೋತ್ಸವ ನೆರವೇರಿತು.

ಗ್ರಾಮ ಸೇರಿ ಸುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ರಥಕ್ಕೆ ಪೂಜೆ ಸಲ್ಲಿಸುವ ಮೂಲಕ ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಸಸ್ತಾಪುರದ ಶ್ರೀ ಸದಾನಂದ ಅಪ್ಪಗಳು, ಶ್ರೀ ಡಾ.ಈಶ್ವರಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಶಾಸಕ ಶರಣು ಸಲಗರ, ಮಾಜಿ ಎಂಎಲ್‌ಸಿ ವಿಜಯಸಿಂಗ್, ಜಾತ್ರಾ ಕಮಿಟಿ ಅಧ್ಯಕ್ಷ ಪ್ರಭು ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬ್ರಹ್ಮಾರೆಡ್ಡಿ ಕೊಂತಾಮೆ, ಉಪಾಧ್ಯಕ್ಷೆ ವಿಜಯಲಕ್ಷ್ಮೀ ಕುದಂಡೆ, ಸ್ವಾಗತ ಸಮಿತಿ ಅಧ್ಯಕ್ಷ ಮಹಾದೇವರೆಡ್ಡಿ, ಪ್ರಮುಖರಾದ ಸಿದ್ರಾಮಪ್ಪ ಗುದಗೆ, ನಿವರ್ತಿರೆಡ್ಡಿ, ಸಂಜುಕುಮಾರ ಮುಳೆ, ಅರುಣ ಪಾಟೀಲ್, ವೆಂಕಟರೆಡ್ಡಿ ಕೊಂತಾಮೆ, ಶಿವಕುಮಾರ ಬಿರಾದಾರ, ಅಮಯಗೀರ ಜಾಗಿರದಾರ, ಸುಭಾಷ ಮಾಳಿ, ಸಿಕಂದರ ಶಿಂಧೆ, ಜಯಕಾಂತರೆಡ್ಡಿ, ಬಾಲಾಜಿ ರೆಡ್ಡಿ, ರವಿ ಸಲಗರೆ, ಫಿರೋಜ್ ಪಟೇಲ್, ದಸ್ತಗೀರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net