ಸಸಿ ನೆಟ್ಟರೆ ಸಾಲದು

CTD 5 DRAMSTALA YOJANE--0009
Published on

ಚಿತ್ರದುರ್ಗ: ಸಸಿಗಳನ್ನು ನೆಟ್ಟು ಪರಿಸರ ಉಳಿಸದಿದ್ದರೆ ಸಕಲ ಜೀವರಾಶಿಗಳಿಗೂ ಮುಂದಿನ ದಿನಗಳಲ್ಲಿ ದೊಡ್ಡ ಆಪತ್ತು ಕಾದಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್‌ಪೂಜಾರಿ ಹೇಳಿದರು.
ವಿಶ್ವಪರಿಸರ ದಿನದ ಅಂಗವಾಗಿ ಯೋಜನೆ ಬಿಸಿ ಟ್ರಸ್ಟ್ ಚಿತ್ರದುರ್ಗ ಕಚೇರಿಯಿಂದ ಮದಕರಿಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಸಿ ನೆಡುವ ಹಾಗೂ ಪರಿಸರ ಜಾಗೃತಿ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಸಿ ನೆಟ್ಟರೆ ಸಾಲದು, ಅದನ್ನು ಪೋಷಿಸಬೇಕೆಂದರು.
ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೇಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ನಾಗರಾಜ್ ಸಂಗಮ್, ಮದಕರಿಪುರ ಗ್ರಾಪಂ ಪಿಡಿಒ ನಾಗರಾಜ್ ಮಾತನಾಡಿದರು.
ಯೋಜನೆ ತಾಲೂಕು ಯೋಜನಾಧಿಕಾರಿ ಬಿ.ಅಶೋಕ್, ಮುಖ್ಯಶಿಕ್ಷಕಿ ರೇಖಾ, ಎಸ್‌ಡಿಎಂಸಿ ಅಧ್ಯಕ್ಷ ವಿಶ್ವನಾಥರೆಡ್ಡಿ, ಶಿಲ್ಪಾ,ನಿಜಲಿಂಗಪ್ಪ, ಸುರೇಶ್, ಸಿಆರ್‌ಪಿ ಶಿವರುದ್ರಪ್ಪ, ಲಕ್ಷ್ಮಣ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net