

ತಿ.ನರಸೀಪುರ: ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ಸವಿತಾ ಸಮಾಜವನ್ನು ಮುಖ್ಯವಾಹಿನಿಗೆ ತರಲು ಸಮುದಾಯದವರು ಸಂಘಟಿರಾಗಬೇಕು ಎಂದು ಸವಿತಾ ಸಮಾಜ ಹೋಬಳಿ ಶಾಖೆ ಸಂಘಗಳ ಒಕ್ಕೂಟದ ಅಧ್ಯಕ್ಷ ಸಿದ್ದೇಶ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಸವಿತಾ ಸಮಾಜದ ಆಶ್ರಯದಲ್ಲಿ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸವಿತಾ ಸಮಾಜವು ತಾಲೂಕಿನಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ ಸಮುದಾಯವಾಗಿದ್ದು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಹಿಂದುಳಿದಿದೆ. ಹೋಬಳಿ ಮಟ್ಟದಲ್ಲಿ ಸವಿತಾ ಮಹರ್ಷಿಗಳ ಜಯಂತಿಯನ್ನು ಆಚರಿಸುವ ಮೂಲಕ ಗ್ರಾಮಗಳಲ್ಲಿ ಸಂಘಟನೆ ಮಾಡಲು ಸಹಕಾರ ನೀಡಬೇಕು ಎಂದರು.
ಸವಿತಾ ಸಮಾಜದ ತಾಲೂಕು ಘಟಕದ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗಪುರುಷರಾಗಿದ್ದಾರೆ. ಅವರು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ. ಸಮುದಾಯದವರು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ನಗರ ಅಧ್ಯಕ್ಷ ರುದ್ರ, ತಾಲೂಕು ಉಪಾಧ್ಯಕ್ಷ ರಾಮಲಿಂಗ, ಗೌರವಾಧ್ಯಕ್ಷ ಕೃಷ್ಣಪ್ಪ, ತಲಕಾಡು ಹೋಬಳಿ ಅಧ್ಯಕ್ಷ ಕೃಷ್ಣ, ಚಿಕ್ಕಣ್ಣ, ಗ್ರಾ.ಪಂ. ಸದಸ್ಯದೇವರಾಜು, ಯಜಮಾನ ಸ್ವಾಮಿ, ರಘು, ಖಜಾಂಚಿ ನಾಗರಾಜು (ಜೋಗಿ ), ಎಚ್.ವಿ.ಲೋಕೇಶ್, ಸ್ವಾಮಿ, ಗಣೇಶ್, ಅಪ್ಪಣ್ಣ, ದೇವರಾಜು, ಸಿದ್ದರಾಜು ಇತರರಿದ್ದರು.
ಪೋಟೋ ಕ್ಯಾಪ್ಷನ್: ತಿ.ನರಸೀಪುರ ಪಟ್ಟಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಸವಿತಾ ಮಹರ್ಷಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಸಿದ್ದೇಶ್, ರುದ್ರ, ರಾಮಲಿಂಗ, ಕೃಷ್ಣಪ್ಪ ಇತರರಿದ್ದರು.