ಸವಿತಾ ಸಮಾಜದವರು ಮಕ್ಕಳಿಗೆ ಶಿಕ್ಷಣ ಕೊಡಿಸಿ

22BTP04
ಬೆಟ್ಟದಪುರದಲ್ಲಿ ಸವಿತ ಸಮಾಜದ ಸುಮುದಾಯದ ಭವನದ ನಿರ್ಮಾಣ ಕಾಮಗಾರಿಗೆ ಮೈಮುಲ್ ಅಧ್ಯಕ್ಷ ಪಿ.ಎಂ ಪ್ರಸನ್ನ ಹಾಗೂ ಗಣ್ಯರು ಭೂಮಿ ಪೂಜೆ ನೆರವೇರಿಸಿದರು. ನಾಗೇಶ್, ಮಂಜುಳಾ, ಅಣ್ಣಯ್ಯಶೆಟ್ಟಿ, ವಿದ್ಯಾಶಂಕರ್, ಐಲಾಪುರ ರಾಮು, ಮಲ್ಲಿಕಾರ್ಜುನ್, ಎ.ಆರ್, ಶಂಕರೇಗೌಡ, ಇಮ್ರಾನ್, ಕರಡೀಪುರ ಕುಮಾರ್, ವೆಂಕಟೇಶ್, ಗಿರೀಶ್, ಮಂಜುನಾಥ್ ಇದ್ದರು.
Published on

ಬೆಟ್ಟದಪುರ: ಸವಿತ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಿದಾಗ ಮಾತ್ರ ಎಲ್ಲ ಕ್ಷೇತ್ರಗಳಲ್ಲೂ ಮುಂದೆ ಬರಲು ಸಾಧ್ಯ ಎಂದು ಮೈಮುಲ್ ಅಧ್ಯಕ್ಷ ಪಿ.ಎಂ. ಪ್ರಸನ್ನ ತಿಳಿಸಿದರು.

ಬೆಟ್ಟದಪುರದಲ್ಲಿ ಸವಿತ ಸಮಾಜದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶಾಸಕ ಕೆ.ಮಹದೇವ್ ಅವರು ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಸಂದರ್ಭದಲ್ಲಿ ಚಿಕ್ಕಪುಟ್ಟ ಸಮಾಜವನ್ನು ಗುರುತಿಸಿ ಸಾಮಾಜಿಕ ನ್ಯಾಯ ನೀಡಿದ್ದಾರೆ. ಅಲ್ಲದೆ, ಸವಿತ ಸಮಾಜಕ್ಕೂ ಒಂದು ನಿವೇಶನ ನೀಡಿರುವುದಲ್ಲದೆ, ಈಗ ಬೆಟ್ಟದಪುರ ಗ್ರಾಮದಲ್ಲಿ ಕೂಡ ಸಮುದಾಯ ಭವನ ನಿರ್ಮಿಸಲು ಐದು ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದರು.

ಜಿಲ್ಲಾ ಸವಿತ ಸಮಾಜದ ಅಧ್ಯಕ್ಷ ನಾಗೇಶ್ ಮಾತನಾಡಿ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸವಿತ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಅವಧಿ ಮುಗಿಯುವುದರೊಳಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ಬೆಟ್ಟದಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಅಣ್ಣಯ್ಯಶೆಟ್ಟಿ, ಕಾರ್ಯದರ್ಶಿ ವಿದ್ಯಾಶಂಕರ್, ತಾಪಂ ಮಾಜಿ ಸದಸ್ಯರಾದ ಐಲಾಪುರ ರಾಮು, ಮಲ್ಲಿಕಾರ್ಜುನ್, ಎ.ಆರ್. ಶಂಕರೇಗೌಡ, ಗ್ರಾಪಂ ಸದಸ್ಯ ಇಮ್ರಾನ್, ಮುಖಂಡರಾದ ಕರಡೀಪುರ ಕುಮಾರ್, ವೆಂಕಟೇಶ್, ಗಿರೀಶ್, ಮಂಜುನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net