

ಕಲಬುರಗಿ: ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದ ಸವಿತಾ ಸಮಾಜದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು. ರಾಜಕೀಯ ಸ್ಥಾನ ಮಾನಗಳನ್ನು ನೀಡಿ ಶಕ್ತಿ ತುಂಬಬೇಕು ಎಂದು ರಾಮನಗರದ ಗೂಡೆಮಾರನಹಳ್ಳಿ ಮಹೇಶ್ವರಿ ಅಮ್ಮ ಆಗ್ರಹಿಸಿದರು.
ನಗರದ ಫಿಲ್ಟರ್‌ಬೆಡ್ ಸಮೀಪದ ಈಶ್ವರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳ ಪದಗ್ರಹಣ, ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸವಿತಾ ಸಮಾಜದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಆನಂದ ವಾರಿಕ್ ಮಾತನಾಡಿ, ರಾಜ್ಯ ಸರ್ಕಾರವೂ ಸವಿತಾ ಮಹರ್ಷಿ ಅಭಿವೃದ್ಧಿ ನಿಗಮಕ್ಕೆ ಐದು ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಇದರಿಂದ ಸಮಾಜದ ಹೆಚ್ಚಿನ ಜನರಿಗೆ ಅನುಕೂಲ ಆಗುತ್ತಿಲ್ಲ, ಸೌಲಭ್ಯ ಪಡೆಯಲೂ ಸಾಧ್ಯವಾಗುತ್ತಿಲ್ಲ. ಆದ್ದರಿಂದ ೫೦ ಕೋಟಿ ರೂ. ಅನುದಾನ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಮಾಜದ ಮುಖಂಡರಾದ ಮಂಡ್ಯದ ಲೋಕೇಶ, ತುಮಕೂರಿನ ನಾಗರಾಜ, ಕೋಲಾರದ ಶಬರೀಶ, ಬೆಂಗಳೂರಿನ ಅಂಜನಾಮೂರ್ತಿ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿಯನ್ನು ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.
ಮಳಖೇಡದ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ಧಪ್ಪ ವಾರಿಕ್ ಅಧ್ಯಕ್ಷತೆ ವಹಿಸಿದ್ದರು. ಕಲಬುರಗಿ ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಆಡಕಿ, ಸಮಾಜದ ಗೌರವ ಅಧ್ಯಕ್ಷ ಅಶೋಕ ಮಾನೆ, ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಹಾಬಾಳ, ಸೂರ್ಯಕಾಂತ ಬೆಣ್ಣೂರ, ಮೋನಪ್ಪ ಚಿಂಚನಸೂರ, ಚಿಕ್ಕಬಳ್ಳಾಪುರದ ತ್ಯಾಗರಾಜ, ಯಲಹಂಕದ ಸವಿತಾ ಸಮಾಜದ ಕೋಮಲ್, ಮಹೇಶ ಉಜ್ಜಲಿಕರ, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಎ.ವಿ. ವೆಂಕಟೇಶ, ರಘುಗುಂಡಪ್ಪ, ಜಯರಾಮ ಮಂಡ್ಯ, ರಘುರಂಗನಾಥï, ರಾಮ ಆಂಜನಪ್ಪ ಇತರರಿದ್ದರು.