ಸವಿಂಧಾನ ಅಂಗೀಕಾರ ದಿನ

11
Published on

ಬೀದರ್: ಡಾ.ಅಂಬೇಡ್ಕರ್ ರಚಿತ ಸಂವಿಧಾನ ಅಂಗೀಕಾರ ದಿನಾಚರಣೆ ನಿಮಿತ್ತ ದಲಿತ ರಕ್ಷಣಾ ವೇದಿಕೆಯಿಂದ ಗುರುವಾರ ಸಂಜೆ 4ಕ್ಕೆ ನಗರದ ಅಂಬೇಡ್ಕರ್ ವೃತ್ತದ ಸಮೀಪ ಸಾರ್ವಜನಿಕ ಸಭೆ ಹಾಗೂ ಭೀಮ ಗೀತೆ ಹಮ್ಮಿಕೊಳ್ಳಲಾಗಿದೆ. ಸಂವಿಧಾನ ತಜ್ಞ ಡಾ. ಗೌತಮ ಬನ್ಸೋಡೆ ಪನ್ಯಾಸ ನೀಡಲಿದ್ದಾರೆ. ಅಮರಾವತಿಯ ಖ್ಯಾತ ಗಾಯಕ ಭೀಮಶಾಹೀರ್ ಭೀಮಗೀತೆ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವೇದಿಕೆ ಜಿಲ್ಲಾಧ್ಯಕ್ಷ ಅಂಬಾದಾಸ ಗಾಯಕವಾಡ ಕೋರಿದ್ದಾರೆ.

ಬ್ರಿಮ್ಸ್ ನಲ್ಲಿ ರಕ್ತದಾನ ಶಿಬಿರ: ಸಂವಿಧಾನ ಜಾಗೃತಿ ವೇದಿಕೆ, ಟೀಮ್ ಯುವಾ, ದಲಿತ ವಿದ್ಯಾರ್ಥಿ ಒಕ್ಕೂಟ, ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘ, ಯುವ ಚಿಂತಕರ ವೇದಿಕೆ, ಬುದ್ಧ ಬಸವ ಅಂಬೇಡ್ಕರ್ ಯುವ ಟ್ರಸ್ಟ್ ಹಾಗೂ ವಿವಿಧ ಪ್ರಗತಿಪರ ಸಂಘಟನೆಯಿಂದ ಸಂವಿಧಾನ ಅಂಗೀಕಾರ ದಿನಾಚರಣೆ ನಿಮಿತ್ತ ಗುರುವಾರ ಬೆಳಗ್ಗೆ 10ಕ್ಕೆ ಇಲ್ಲಿನ ಬ್ರಿಮ್ಸ್ ಆವರಣದಲ್ಲಿರುವ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಜಿಲ್ಲೆಯ ಯುವಕ, ಯುವತಿಯರು, ಸಂಘ ಸಂಸ್ಥೆ ಪ್ರಮುಖರು, ಸಂವಿಧಾನ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಬೇಕು ಎಂದು ಬುದ್ಧ ಬಸವ ಅಂಬೇಡ್ಕರ್ ಯುವಕ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಗೊರನಾಳಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net