ಸವಾಲು ಸ್ವೀಕರಿಸಿ ಸಾಧನೆಗೆ ಶ್ರೀ ಗುರು ಪ್ರೇರಣೆ

shree guru (1)
Published on

ಕಲಬುರಗಿ: ಸಾಧಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಭವಿಷ್ಯದಲ್ಲಿ ಅಧ್ಯಯನಕ್ಕೆ ಬರುವ ಮಕ್ಕಳು ಸವಾಲನ್ನು ಸ್ವೀಕರಿಸಿ ಸಾಧನೆಯತ್ತ ಹೋಗಲು ಗುರುಗಳು ಪ್ರೇರಣೆಯಾಗಿದ್ದು, ಅದಕ್ಕೆ ತಕ್ಕಂತೆ ಶ್ರೀಗುರು ಕಾಲೇಜು ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ನಗರದ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪ್ರತಿಭಾ ಪುರಸ್ಕಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಸಾಧಕ ವಿದ್ಯಾರ್ಥಿಗೆ ಒಂದು ಲಕ್ಷ ರೂ. ಬಹುಮಾನ ನೀಡಿ, ಇತರರಿಗೆ ಸ್ಫೂರ್ತಿ ತುಂಬಲಾಗುತ್ತಿದೆ. ಶಿಕ್ಷಣದಿಂದ ಅಭಿವೃದ್ಧಿ, ಹೆಸರು, ಪ್ರಗತಿ ಸಾಧ್ಯ. ಸಂಸ್ಕಾರಿಗಳಾದರೆ ಸಾಧನೆಗೆ ಶಕ್ತಿ ಬರುತ್ತದೆ ಎಂದರು.

ದೇಶದಲ್ಲಿ ಮಹಿಳೆಯರಿಗೆ ಶೇ.೩೩ ಮೀಸಲು ನೀಡುವ ಕಾಯ್ದೆ ರೂಪಿಸುವ ವೇಳೆ ಸಂಸತ್ತಿನಲ್ಲಿದ್ದೆ. ಪ್ರಸ್ತುತ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶ ಪಡೆಯುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಿ, ಬೆಳೆದು ದೇಶ ಸೇವೆ ಮಾಡಬೇಕು. ವ್ಯಕ್ತಿತ್ವವನ್ನು ಯಾವುದೇ ಕಾರಣಕ್ಕೆ ಕಳೆದುಕೊಳ್ಳಬಾರದು. ಬಂಗಾರದAತೆ ಸದಾ ಹೊಳೆಯುತ್ತಿರಬೇಕು. ಕಾಲ ಬದಲಾಗುತ್ತಿದ್ದು, ಶ್ರೀಗುರು ಸಂಸ್ಥೆಯೂ ಇಂಜಿನಿಯರ್, ಮೆಡಿಕಲ್, ಟೆಕ್ನಿಕಲ್‌ನಂತ ಉನ್ನತ ಶಿಕ್ಷಣ ಸಂಸ್ಥೆ ಆರಂಭಿಸಬೇಕು. ಅದಕ್ಕೆ ಜತೆಗಿರುತ್ತೇನೆ ಎಂದು ಹೇಳಿದರು.

ಸಂಸ್ಥೆ ಕಾರ್ಯದರ್ಶಿ ನಿತಿನ್ ಎ. ನಾಯ್ಕ್ ಮಾತನಾಡಿ, ಸಂಸ್ಥೆಯಲ್ಲಿ ಪ್ರತಿ ವರ್ಷ ಟಾಪರ್‌ಗಳ ಅಂಕಗಳು ಏರುಗತಿಯಲ್ಲಿ ಸಾಗುತ್ತಿರುವುದು ಹೆಮ್ಮೆಯ ವಿಷಯ. ವಿದ್ಯಾರ್ಥಿಗಳ ಶ್ರಮ, ಸಂಸ್ಥೆಯ ಎಲ್ಲ ಸಿಬ್ಬಂದಿಯ ಕಾರ್ಯಶೈಲಿಯಿಂದ ಸಾಧನೆ ಸಾಧ್ಯವಾಗಿದೆ ಎಂದರು.
ಆಡಳಿತಾಧಿಕಾರಿ ನೇಹಾ ನಾಯ್ಕ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಹಲವು ಸವಾಲು, ಪ್ರಶ್ನೆಗಳು ಬರುತ್ತವೆ. ಶ್ರಮ, ಪ್ರಯತ್ನವಿಲ್ಲದೆ ಸಾಧನೆ ಅಸಾಧ್ಯ. ಹಿಂದಡಿ ಇಡದೆ ಮುಂದೆ ಸಾಗಬೇಕು. ಮೊಬೈಲ್‌ನಿಂದ ದೂರ ಇರಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸಾಗಬೇಕು ಎಂದು ಹೇಳಿದರು.
ಪ್ರಾಂಶುಪಾಲ ವಿದ್ಯಾಸಾಗರ ಗೋಗಿ, ಸಂಸ್ಥೆ ಸದಸ್ಯರಾದ ಗುರುರಾಜ ಎ.ನಾಯ್ಕ್, ಮನಿಶಾ ನಾಯ್ಕ್, ನವನೀತ ನಾಯ್ಕ್ ಇತರರಿದ್ದರು. ಶಂಕರ ಬಾಳಿ ಅತಿಥಿ ಪರಿಚಯಿಸಿದರು. ಲತಾ, ವೈಷ್ಣವಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net