

ಶೃಂಗೇರಿ: ಆಧುನಿಕ ಯುಗದಲ್ಲಿ ಹಲವು ಸವಾಲುಗಳು ನಮ್ಮ ಎದುರಿಗಿವೆ. ವಿದ್ಯಾರ್ಥಿಗಳು ಪರಿಸ್ಥಿತಿ ಅರಿತು ಮುನ್ನಡೆಯುವ ಅಗತ್ಯವಿದೆ. ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಶೃಂಗೇರಿ: ಆಧುನಿಕ ಯುಗದಲ್ಲಿ ಹಲವು ಸವಾಲುಗಳು ನಮ್ಮ ಎದುರಿಗಿವೆ. ವಿದ್ಯಾರ್ಥಿಗಳು ಪರಿಸ್ಥಿತಿ ಅರಿತು ಮುನ್ನಡೆಯುವ ಅಗತ್ಯವಿದೆ. ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳ ಉದ್ಘಾಟನೆ ಮತ್ತು ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ನಮಗೆ ಬದುಕುವ ಹಕ್ಕು ನೀಡಿದೆ. ಸಂವಿಧಾನದ ಉನ್ನತ ಮೌಲ್ಯಗಳನ್ನು ಗೌರವಿಸುವುದು ಎಲ್ಲರ ಕರ್ತವ್ಯ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಮೂಲಕ ಪ್ರತಿ ಪ್ರಜೆಗೂ ಸಮಾನ ಸ್ಥಾನ ಹಾಗೂ ಸಮಾನ ಅವಕಾಶಗಳನ್ನು ಸಂವಿಧಾನ ನಮಗೆ ನೀಡಿದೆ. ದೇಶದ ಮೌಲ್ಯಗಳನ್ನು ನಾವು ಮೊದಲು ಅರ್ಥೈಸಿಕೊಳ್ಳಬೇಕು. ಆಗ ನಮಗೆ ಸಂವಿಧಾನ ಅರ್ಥವಾಗುತ್ತದೆ ಎಂದರು.
ಗ್ರಾಮೀಣ ಜನರಿಗೂ ಕಾನೂನಿನ ಸಾಮಾನ್ಯ ಜ್ಞಾನ ಒದಗಿಸುವುದು ಸಾಕ್ಷರತಾ ಯಾತ್ರೆ ಉದ್ದೇಶ. ಮೂಲಭೂತ ಹಕ್ಕಿನ ಬಗ್ಗೆ ಪ್ರತಿಯೊಬ್ಬರಿಗೂ ಅರಿವು ಇರಬೇಕು ಎಂದರು.
ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ತ್ರಿಮೂರ್ತಿ ಮಾತನಾಡಿ, ಕಾಲೇಜಿನ ವಿವಿಧ ವೇದಿಕೆ ಮೂಲಕ ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳು, ವಿದ್ಯಾರ್ಥಿಗಳ ವಿಕಸನಕ್ಕೆ ದಾರಿ ಮಾಡಿಕೊಡುತ್ತವೆ. ಸಾಧನೆ ಮಾಡುವ ಮನಸ್ಥಿತಿ ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳು ಗುರುಗಳ ಮಾರ್ಗದರ್ಶನ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯೆ ಭಾರತೀ ಮಾತನಾಡಿ, ಗ್ರಾಮೀಣ ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವತ್ತ ಶಿಕ್ಷಣ ಸಂಸ್ಥೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಆಶೀಶ್ ದೇವಾಡಿಗ, ಕೌಸ್ತುಭ ಭಟ್, ರವಿಶಂಕರ್, ಪ್ರದೀಪ್ ಯಡದಾಳು, ಸಂದೀಪ್, ಕೇಶವ ನಾಯಕ್, ಪ್ರದೀಪ್ ಕಲ್ಲೋಳ್ಳಿ, ಅನಿಲ್ ಹೊಸಕೊಪ್ಪ, ಮರೀಸ್ವಾಮಿ, ಮಂಜುನಾಥ್, ಆಶಾಲತಾ, ಶಿವಕುಮಾರ್, ರವಿಶಂಕರ್ ಇತರರಿದ್ದರು.