ಸವಾಲು ಎದುರಿಸಿ ಬದುಕಬೇಕು

10..1
ನಿಪ್ಪಾಣಿ ನಗರದ ಜಿಐ ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ.ಎಸ್.ಎಲ್. ಪಾಟೀಲ ಮಾತನಾಡಿದರು. ಬಸವರಾಜೇಶ್ವರಿ ಉಳ್ಳೇಗಡ್ಡಿ, ಡಾ.ಎಂ.ಎಂ. ಹುರಳಿ ಇದ್ದರು.
Published on

ನಿಪ್ಪಾಣಿ: ವ್ಯಕ್ತಿ ಸ್ವಾವಲಂಬಿಯಾಗಿ ಬದುಕಲು ಏನನ್ನಾದರೂ ಸಾಸಲು ಹೊರಟಾಗ ಹಲವು ಸವಾಲುಗಳು ಎದುರಾಗುತ್ತವೆ. ಸಂಕಲ್ಪ ಶಕ್ತಿಯಿಂದ ಸವಾಲುಗಳನ್ನು ಮೀರಿ ಬೆಳೆಯಲು ವಿದ್ಯಾರ್ಥಿಗಳು ಪ್ರಯತ್ನಿಸಬೇಕು ಎಂದು ಪ್ರಾಚಾರ್ಯ ಎಸ್.ಎಲ್. ಪಾಟೀಲ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಜಿಐ ಬಾಗೇವಾಡಿ ಮಹಾವಿದ್ಯಾಲಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಅರ್ಥಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರದ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉದ್ಯಮಶೀಲತೆಯಲ್ಲಿನ ಸವಾಲುಗಳು ಮತ್ತು ಅವಕಾಶಗಳು ವಿಷಯದ ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರತಿ ವಿದ್ಯಾರ್ಥಿ ಶಕ್ತಿ ಮತ್ತು ದೌರ್ಬಲ್ಯ ಅರಿಯಬೇಕು. ಇರುವ ಅವಕಾಶಗಳ ಕುರಿತು ಯೋಚಿಸಬೇಕು. ಸ್ವಯಂ ಆತ್ಮವಿಶ್ವಾಸ ಬೆಳೆಸಿಕೊಂಡು ಸ್ವಂತ ಉದ್ಯೋಗ ಮಾಡಲು ಶ್ರಮಿಸಬೇಕು. ಆಯಾ ಕ್ಷೇತ್ರಗಳ ಬದಲಾವಣೆ ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು. ಎಲ್ಲದಕ್ಕೂ ನಿಶ್ಚಿತ ಗುರಿ ಇರಬೇಕು ಎಂದರು.

ವಿಚಾರ ಸಂಕಿರಣದಲ್ಲಿ ವಿವಿಧ ಮಹಾವಿದ್ಯಾಲಯಗಳಿಂದ 122 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅದರಲ್ಲಿ 25 ವಿದ್ಯಾರ್ಥಿಗಳು ಪ್ರಬಂಧ ಬರೆದರು. ಬೆಳಗಾವಿಯ ಗೋಗಟೆ ಮಹಾವಿದ್ಯಾಲಯದ ಸೋನಾಲಿ ಪಡತಾರೆ

ಪ್ರಥಮ, ಕೆಎಲ್‌ಇ ಸಂಸ್ಥೆಯ ಹುಬ್ಬಳ್ಳಿಯ ಶಿಕ್ಷಣ ಮಹಾವಿದ್ಯಾಲಯದ ಕೃತಿಕಾ ಭಾವಿಕೆರೆ ದ್ವಿತೀಯ ಹಾಗೂ ಕೆಎಲ್‌ಇ ಸಂಸ್ಥೆಯ ಸ್ಥಳೀಯ ಬಿಬಿಎ ಮಹಾವಿದ್ಯಾಲಯದ ಸೌಮ್ಯಾ ಭಜಂತ್ರಿ ತೃತೀಯ ಸ್ಥಾನ ಗಳಿಸಿದರು. ಮಾಲೂರಿನ (ಕೋಲಾರ ಜಿಲ್ಲೆ) ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಮತ್ತು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿ ರಮೇಶ ಮಾಳಿ ಪ್ರಾಯೋಜಕತ್ವದಲ್ಲಿ ವಿಜೇತರಿಗೆ ಕ್ರಮವಾಗಿ 5,000 ರೂ., 3,000 ರೂ. ಮತ್ತು 2,000 ರೂ. ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಪ್ರಾಚಾರ್ಯ ಡಾ. ಎಂ.ಎಂ. ಹುರಳಿ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಬಸವರಾಜೇಶ್ವರಿ ಉಳ್ಳೇಗಡ್ಡಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರಿಯಾಂಕಾ ಕಮತೆ, ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ಅಮಾನುಲ್ಲಾ ನದಾಫ್ ಇತರರಿದ್ದರು. ರೋಹಿತ ಪಾಟೀಲ ಸ್ವಾಗತಿಸಿದರು. ಅಭಿಷೇಕ ಢೇರೆ ಪರಿಚಯಿಸಿದರು. ಶ್ರೀದೇವಿ ಮುಂಡೆ ಮತ್ತು ನಮಿತಾ ನಾಯಿಕ ನಿರೂಪಿಸಿದರು. ಚೈತ್ರಾ ಕವಲಾಪುರೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net