ಸವಾಲು ಎದುರಿಸಲು ಬೇಕು ಆತ್ಮವಿಶ್ವಾಸ

CTD ROTARY
Published on

ಚಿತ್ರದುರ್ಗ: ಕೌಟುಂಬಿಕ, ಸಾಮಾಜಿಕ, ಭಾವನಾತ್ಮಕವಾಗಿ ಯಾರು ಬಲಿಷ್ಠರಾಗಿರುತ್ತಾರೋ ಅಂತಹವರು ಮಾತ್ರ ಜೀವನದಲ್ಲಿ ಯಶಸ್ಸಿನ ಮೆಟ್ಟಿಲು ಏರಬಲ್ಲರು ಎಂದು ಡಾ.ನವೀನ್ ಬಿ.ಸಜ್ಜನ್ ಹೇಳಿದರು.
ರೋಟರಿ ಕ್ಲಬ್, ಪ್ರಥಮ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ವೈದ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಆತ್ಮವಿಶ್ವಾಸದೊಂದಿಗೆ ಎಂತಹ ಸನ್ನಿವೇಶ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಇರುವಂಥವರು ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದರು.
ಸಾಧಕರನ್ನು ಡಾ.ಮಹೇಶ್ ಗೌರವಿಸಿದರು. ರೋಟರಿ ಕ್ಲಬ್ ಚಿನ್ಮೂಲಾದ್ರಿ ಅಧ್ಯಕ್ಷ ಮಂಜುನಾಥ್ ಭಾಗವತ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಸೈನಿಕ ಜಯಣ್ಣ, ಡಾ.ಮನೋಜ್, ಡಾ.ಸಿದ್ದಲಿಂಗಪ್ಪ, ಡಾ.ಅಫ್ರಿದಿ, ಡಾ.ರಶ್ಮಿ ಮತ್ತಿತರರನ್ನು ಗೌರವಿಸಲಾಯಿತು.
ರೋಟರಿ ಕ್ಲಬ್ ಉಪಾಧ್ಯಕ್ಷ ಗುರುಮೂರ್ತಿ, ಪ್ರಥಮ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ನಂಜುಂಡೇಶ್ವರ, ಖಜಾಂಚಿ ಸುಮಾ, ಬೆಸ್ಕಾಂ ಗುತ್ತಿಗೆದಾರ ಪ್ರಸನ್ನ, ಕೊಪ್ಪಳದ ಶಶಿಧರ್, ಚಂದ್ರಿಕಾ, ಅನಿತಾ, ದೀಪಿಕಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net