ಸವಾಲು ಎದುರಿಸಲು ದೇಶಪ್ರೇಮ ಬೆಳೆಯಲಿ

15kmr1
Published on

ಕಮಲನಗರ: ನಮ್ಮ ದೇಶ ಸಾಧಿಸಬೇಕಾದದ್ದು ಸಾಕಷ್ಟಿದೆ. ಭಯೋತ್ಪಾದನೆ, ಮೂಲಭೂತ ವಾದ, ಅಪರಾಧೀಕರಣ ಸೇರಿ ಹಲವು ಸವಾಲು ಮತ್ತು ಸಮಸ್ಯೆಗಳು ನಮ್ಮ ಮುಂದಿದ್ದು, ಮೆಟ್ಟಿ ನಿಲ್ಲಲು ದೇಶಪ್ರೇಮ ಜತೆಗೆ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಅಮಿತಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಡಾ.ಚನ್ನಬಸವ ಪಟ್ಟz್ದÉÃವರು ಕೆರೆ ಆವರಣದಲ್ಲಿ ಮಂಗಳವಾರ ಸ್ವಾತಂತ್ರö್ಯ ಸ್ಮರಣೆಗಾಗಿ ನಿರ್ಮಿಸಿದ ಶಿಲಾಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು. ತಾಪಂ ಇಒ ಶಿವಕುಮಾರ ಘಾಟೆ ಮಾತನಾಡಿ, ಪ್ರತಿ ಗ್ರಾಪಂ ಕೇಂದ್ರದಲ್ಲಿ ಸ್ವಾತಂತ್ರö್ಯ ಸ್ಮರಣೆಯ ಶಿಲಾಫಲಕ ಅಳವಡಿಸಿ ಪ್ರಧಾನಿ, ಮುಖ್ಯಮಂತ್ರಿಯ ಘೋಷವಾಕ್ಯ, ಬಸವಣ್ಣನ ವಚನಗಳನ್ನು ಬರೆಸಲಾಗಿದೆ ಎಂದು ತಿಳಿಸಿದರು. ಗ್ರಾಪಂ ಅಧ್ಯಕ್ಷ ಶಿವಕುಮಾರ ಝುಲ್ಪೆ ಧ್ವಜಾರೋಹಣ ಮಾಡಿದರು. ನಿವೃತ್ತ ಪ್ರಾಚಾರ್ಯ ಡಾ.ಎಸ್.ಎಸ್. ಮೈನಾಳೆ ವಿಶೇಷ ಉಪನ್ಯಾಸ ನೀಡಿದರು. ತಾಪಂ ಸಹಾಯಕ ನಿರ್ದೇಶಕ ಹಣಮಂತರಾಯ ಕೌಟಗೆ, ಸಿಪಿಐ ರಾಮಪ್ಪ ಸಾವಳಗಿ, ಪಿಎಸ್‌ಐ ಚಂದ್ರಶೇಖರ ನಿರ್ಣೆ, ಪಿಡಿಒ ರಾಜಕುಮಾರ ತಂಬಾಕೆ, ಬಿಆರ್‌ಪಿ ಶಶಿಕಾಂತ ಬಿಡವೆ, ಬಾಲಾಜಿ ತೆಲಂಗ, ಶಿವಾನಂದ ವಡ್ಡೆ, ಶ್ರೀರಂಗ ಪರಿಹಾರ, ಜನಾರ್ಧನ ಸಾವರ್ಗೇಕರ್, ಸಾಯಿನಾಥ ಕಾಂಬಳೆ, ಶಾಂತಕುಮಾರ ಬಿರಾದಾರ, ರವಿ ಕಾರಬಾರಿ, ಸಿಆರ್‌ಪಿ ನಾಗೇಶ ಸಂಗಮೆ ಇತರರಿದ್ದರು. ಉಮಾಕಾಂತ ಮಹಾಜನ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net